ನಾಪತ್ತೆಯಾಗಿದ್ದ ವ್ಯಕ್ತಿ, ಶವವಾಗಿ ಬಾವಿಯಲ್ಲಿ ಪತ್ತೆ
ಪಡುಬಿದ್ರಿ ಎ.23 ( ಉಡುಪಿ ಟೈಮ್ಸ್ ವರದಿ): ಬಾವಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಾರ್ಕಳದ ಇನ್ನಾ ಗ್ರಾಮದಲ್ಲಿ ನಡೆದಿದೆ. ಸುಧಾಕರ ಸಫಲಿಗ(41) ಮೃತಪಟ್ಟವರು. ಇವರು ಕುಡಿತದ ಅಭ್ಯಾಸವನ್ನು ಹೊಂದಿದ್ದು ಕೆಲಸಕ್ಕೆಂದು ಮನೆಯಿಂದ ಹೋದವರು ನಾಪತ್ತೆಯಾಗಿದ್ದರು.
ಎ.20ರ ಬೆಳಿಗ್ಗೆ ಯಿಂದ ಎ.23ರ ಬೆಳಗ್ಗಿನ ಮಧ್ಯಾವಧಿಯಲ್ಲಿ ಇನ್ನಾ ಗ್ರಾಮದ ಕಾಫಿನಾಡಿನ ರತಿ ಸಫಲಿಗ ಎಂಬುವರಿಗೆ ಸೇರಿದ ಜಾಗದಲ್ಲಿರುವ ಆವರಣ ಗೋಡೆ ಇಲ್ಲದ ಬಾವಿಗೆ ಬಿದ್ದು ಮೃತಪಟ್ಟಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.