ಹೆಬ್ರಿ: ವಿಪರೀತ ತಲೆನೋವಿನಿಂದ ಯುವತಿ ಮೃತ್ಯು
ಶಂಕರನಾರಾಯಣ: ವಿಪರೀತ ತಲೆನೋವಿಗೆ ಯುವತಿಯೊಬ್ಬಳು ಮೃತಪಟ್ಟ ಘಟನೆ ಕೋಟೇಶ್ವರದಲ್ಲಿ ನಡೆದಿದೆ.
ಹೆಬ್ರಿಯ ಬೆಳ್ವೆ ಗ್ರಾಮದ ರಶ್ಮಿತಾ ಮೃತಪಟ್ಟ ಯುವತಿ. ಎ.22 ರಂದು ಬೆಳಿಗ್ಗೆ ರಶ್ಮಿತಾ ಅವರು ತಲೆ ನೋವು ಎಂದು ಹೇಳಿ ಮನೆಯಲ್ಲಿ ಒದ್ದಾಡುತ್ತಿದ್ದರು. ಕೂಡಲೇ ಅವರನ್ನು ಹಾಲಾಡಿಯ ವೈದ್ಯರೊಬ್ಬರ ಬಳಿ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಈ ವೇಳೆ ಆಸ್ಪತ್ರೆಯಲ್ಲಿ ರಶ್ಮಿತಾ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಆಸ್ಪತ್ರೆಗೆ ಕರೆತರುವ ದಾರಿ ಮಧ್ಯೆ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.