ಜೆಡಿಎಸ್ ಮುಖಂಡ ಕೆಮ್ತೂರು ನಾಗರಾಜ ಭಟ್ ಹೃದಯಾಘಾತದಿಂದ ನಿಧನ
ಉಡುಪಿ ಎ.22 (ಉಡುಪಿ ಟೈಮ್ಸ್ ವರದಿ): ಕೆಮ್ತೂರಿನ ದಿವಂಗತ ಗೋಪಾಲ್ ಕೃಷ್ಣ ರವರ ಮಗ ನಾಗರಾಜ ಭಟ್ ನಿಧನರಾಗಿದ್ದಾರೆ.
ಅವರಿಗೆ 60 ವರ್ಷ ವಯಸ್ಸಾಗಿದ್ದು ಹೃದಯಾಘಾತದಿಂದ ನಿನ್ನೆ ರಾತ್ರಿ ಕೆಮ್ತೂರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಕೃಷಿಕರಾಗಿದ್ದ ಇವರು ಜೆಡಿಎಸ್‍ನ ಮಾಜಿ ಜಿಲ್ಲಾ ಕಾರ್ಯದರ್ಶಿಯಾಗಿದ್ದರು. ಇವರು ಅವಿವಾಹಿತರಾಗಿದ್ದು, ಇಬ್ಬರು ತಂಗಿಯರನ್ನು ಅಗಲಿದ್ದಾರೆ.