ಬಟ್ಟೆಯಂಗಡಿಯ ಸೇಲ್ಸ್ ಮೆನ್ ಹೊಳೆಗೆ ಬಿದ್ದು ಮೃತ್ಯು
ಹೆಬ್ರಿ ಎ.21:(ಉಡುಪಿ ಟೈಮ್ಸ್ ವರದಿ): ಆಕಸ್ಮಿಕವಾಗಿ ಹೊಳೆಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹೆಬ್ರಿಯಲ್ಲಿ ನಡೆದಿದೆ.
ಕೃಷ್ಣಮೂರ್ತಿ (30) ಮೃತಪಟ್ಟವರು. ಇವರು, ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮೆನ್ ಆಗಿ ಕೆಲಸ ಮಾಡಿಕೊಂಡಿದ್ದು ವಾರಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದರು. ಅದರಂತೆ ಎ.20 ರಂದು ಮನೆಗೆ ಬಂದಿದ್ದು, ಎ. 21 ರಂದು ಬೆಳಿಗ್ಗೆ ಮನೆಯ ಬಳಿ ಇರುವ ಹೆಬ್ರಿ ಗ್ರಾಮದ ಜರ್ವತ್ತು ಹೊಳೆಗೆ ಸ್ನಾನ ಮಾಡಲೆಂದು ಮನೆಯಿಂದ ಹೋದವರು ವಾಪಾಸು ಬಾರದೇ ಇದ್ದುದನ್ನು ನೋಡಿ ಅವರ ತಾಯಿ ಹಾಗೂ ಅಣ್ಣ ನವರು ಹೊಳೆಯ ಬದಿ ಹುಡುಕಾಡುತ್ತಿದ್ದರು.
ಈ ವೇಳೆ ಕೃಷ್ಣಮೂರ್ತಿ ಅವರು ಹೊಳೆಯ ದಡದಲ್ಲಿರುವ ಕಲ್ಲುಬಂಡೆಗೆ ಸಿಕ್ಕಿ ಹಾಕಿರುವುದು ಕಂಡು ಬಂದಿದೆ. ಕೂಡಲೇ ಅವರನ್ನು ದಡಕ್ಕೆ ಕರೆದುಕೊಂಡು ಬಂದು ನೋಡಿದಾಗ ಅವರು ಮೃತಪಟ್ಟಿರುವುದು ತಿಳಿದು ಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ