ಉದ್ಯಾವರ ಸುವರ್ಣ ಮಹೋತ್ಸವ: ಏ 24-25ರ ಸಮಾರೋಪ ಸಮಾರಂಭ ಮುಂದೂಡಿಕೆ

ಉಡುಪಿ(ಉಡುಪಿ ಟೈಮ್ಸ್ ವರದಿ): ಸಂತ ಫ್ರಾನ್ಸಿಸ್ ಝೇವಿಯರ್ ಉದ್ಯಾವರ ದೇವಾಲಯದ ವ್ಯಾಪ್ತಿಯಲ್ಲಿರುವ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯ ಸಮಾರೋಪ ಸಮಾರಂಭ ಇದೇ ಏಪ್ರಿಲ್ 24 ಮತ್ತು 25 ರಂದು ನಡೆಯಬೇಕಾಗಿದ್ದು, ಕೊರೊನ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ರಾಜ್ಯ ಸರಕಾರವು ತಿಳಿಸಿದ ಕೊರೋನದ ನಿಯಮದ ಪ್ರಕಾರ ಎಲ್ಲಾ ಸಮಾರಂಭಗಳು ರದ್ದುಗೊಳಿಸಲಾಗಿದ್ದು, ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯ ಪೂರ್ವ ನಿರ್ಧರಿತ ಕಾರ್ಯಕ್ರಮಗಳು ಈ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ. ಮುಂದಿನ ಕಾರ್ಯಕ್ರಮಗಳನ್ನು ಮೇ 4 ರ ಬಳಿಕ ನಿರ್ಧರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿ ಸಂಭ್ರಮದ 59 ಕಾರ್ಯಕ್ರಮವನ್ನು ಈಗಾಗಲೇ ಕೊನೆಗೊಳಿಸಿದ್ದು, ಸಮಾರೋಪ ಸಮಾರಂಭವನ್ನು ಇದೇ 24 ಮತ್ತು 25 ರಂದು ನಡೆಸಲು ಈ ಹಿಂದೆ ನಿರ್ಧರಿಸಲಾಗಿತ್ತು. ರಾಜ್ಯದ ಸಚಿವರುಗಳು, ಧರ್ಮಾಧ್ಯಕ್ಷರುಗಳು ಮತ್ತು ಹಲವು ಜನಪ್ರತಿನಿಧಿಗಳು ಈ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದರು. ಸಮಾರೋಪ ಸಮಾರಂಭದಲ್ಲಿ ಮಂಗಳೂರಿನ ಖ್ಯಾತ ತುಳು ಹಾಸ್ಯಮಯ ನಾಟಕ ಒರಿಯರ್ದೊರಿ ಅಸಲ್ ಮತ್ತು ಕೊಂಕಣಿ ನಾಟಕ ಖೆಳ್ ಪ್ರದರ್ಶನಗೊಳ್ಳಲಿದ್ದವು.

Leave a Reply

Your email address will not be published. Required fields are marked *

error: Content is protected !!