ಕೋವಿಡ್ ಸೋಂಕು ಭಾರಿ ಪ್ರಮಾಣದ ಏರಿಕೆ: ಭಾರತಕ್ಕೆ ತೆರಳದಂತೆ ನಾಗರಿಕರಿಗೆ ಅಮೆರಿಕ ಸೂಚನೆ
ವಾಷಿಂಗ್ಟನ್: ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹೊತ್ತಿನಲ್ಲೇ, ಭಾರತಕ್ಕೆ ತೆರಳದಂತೆ ಅಮೆರಿಕ ಸರ್ಕಾರ ತನ್ನ ನಾಗರಿಕರಿಗೆ ಸೂಚನೆ ನೀಡಿದೆ.
ಈ ಬಗ್ಗೆ ಅಮೆರಿಕದ ಸಿಡಿಸಿ (Centers for Disease Control and Prevention) ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ತುರ್ತು ಸಂದರ್ಭ ಹೊರತು ಪಡಿಸಿ ಭಾರತಕ್ಕೆ ಪ್ರಯಾಣ ಕೈಗೊಳ್ಳದಂತೆ ಸೂಚನೆ ನೀಡಿದೆ.
‘ಭಾರತದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಅಮೆರಿಕ ನಾಗರಿಕರು ಭಾರತ ಪ್ರವಾಸ ಅಥವಾ ಪ್ರಯಾಣ ಕೈಗೊಳ್ಳಬಾರದು. ನೀವು ಸಂಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡಿದ್ದರೂ ಕೂಡ ಭಾರತದ ಡಬಲ್ ರೂಪಾಂತರ ವೈರಸ್ ಸೋಂಕು ನಿಮ್ಮನ್ನು ಭಾದಿಸಬಹುದು. ಹೀಗಾಗಿ ತುರ್ತು ಸಂದರ್ಭ ಹೊರತು ಪಡಿಸಿ ಭಾರತ ಪ್ರವಾಸ ಅಥವಾ ಪ್ರಯಾಣವನ್ನು ತಡೆ ಹಿಡಿಯಿರಿ. ಒಂದು ವೇಳೆ ನೀವು ಭಾರತಕ್ಕೆ ತೆರಳಲೇ ಬೇಕು ಎಂದಾದರೆ ಪ್ರವಾಸಕ್ಕೂ ಮೊದಲು ಕೋವಿಡ್ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದು ಸಂಪೂರ್ಣ ಸಮರ್ಥರಾಗಿ ತೆರಳಿ ಎಂದು ಸಲಹೆ ನೀಡಿದೆ.