5 ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಗೆ ಹೈಕೋರ್ಟ್ ಆದೇಶ: ನಿರಾಕರಿಸಿದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ

ಅಲಹಾಬಾದ್: ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಲಖನೌ, ಅಲಹಾಬಾದ್, ಕಾನ್ಪುರ್, ವಾರಣಾಸಿ ಮತ್ತು ಗೋರಖ್‌ಪುರದಲ್ಲಿ ಒಂದು ವಾರದವರೆಗೆ ಲಾಕ್‌ಡೌನ್ ವಿಧಿಸುವಂತೆ ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿತ್ತು.

ಆದರೆ, ಈ ಆದೇಶಕ್ಕೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಸರ್ಕಾರ ಸದ್ಯಕ್ಕೆ ಆ ಐದು ನಗರಗಳಲ್ಲಿ ಯಾವುದೇ ರೀತಿಯ ಲಾಕ್ ಡೌನ್ ಮಾಡುವುದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿನ ಕ್ವಾರಂಟೈನ್ ಕೇಂದ್ರಗಳ ಸ್ಥಿತಿ ಹಾಗೂ ಕೊರೋನಾವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುವ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ ವರ್ಮಾ ಮತ್ತು ಅಜಿತ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಐದು ನಗರಗಳಲ್ಲಿ ಲಾಕ್ ಡೌನ್ ಗೆ ಆದೇಶಿಸಿತ್ತು.

ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣ ಅವಶ್ಯಕವಾಗಿದೆ. ಈಗಾಗಲೇ ಸರ್ಕಾರ ಕೊರೋನಾ ನಿಯಂತ್ರಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದು ಮುಂದೆಯೂ ಕಠಿಣ ರೂಲ್ಸ್ ತರಲಾಗುವುದು. ಜೀವ ಉಳಿಸುವುದರ ಜೊತೆಗೆ ಜೀವವನ್ನು ಕಾಪಾಡಬೇಕು. ಇಂತಹ ಸಂದರ್ಭದಲ್ಲಿ ಇಡೀ ನಗರವನ್ನು ಲಾಕ್ ಡೌನ್ ಮಾಡಿದರೆ ಜೀವನ ನಿರ್ವಹಣೆ ಕಷ್ಟ ಆಗಲಿದೆ. ಜನರು ಸಹ ಸ್ವಯಂ ನಿರ್ಬಂಧ ಹಾಕಿಕೊಳ್ಳುತ್ತಿದ್ದಾರೆ ಎಂದು ಸರ್ಕಾರ ತಿಳಿಸಿದೆ. 

Leave a Reply

Your email address will not be published. Required fields are marked *

error: Content is protected !!