ಆಮ್ಲಜನಕದ ಪೂರೈಕೆಯಲ್ಲಿ ತೊಂದರೆ: ಸರ್ಕಾರಿ ಆಸ್ಪತ್ರೆಯಲ್ಲಿ 7 ಕೋವಿಡ್ ರೋಗಿಗಳ ಸಾವು
ವೆಲ್ಲೂರು: ವೆಲ್ಲೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ(ಜಿವಿಎಂಸಿಎಚ್) ಕೋವಿಡ್ ವಾರ್ಡ್ ಮತ್ತು ಇತರ ನಿರ್ಣಾಯಕ ಆರೈಕೆ ವಾರ್ಡ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಏಳು ರೋಗಿಗಳು ಸೋಮವಾರ ನಿಗೂಢ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ.
ಮೃತ ಕುಟುಂಬಸ್ಥರು ಆಮ್ಲಜನಕದ ಪೂರೈಕೆಯಲ್ಲಿ ಲೋಪವಾಗಿದ್ದರಿಂದ ಸಾವು ಸಂಭವಿಸಿದೆ ಆರೋಪಿಸಿದ್ದಾರೆ. ನಾಲ್ವರು ರೋಗಿಗಳು ಕೋವಿಡ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇತರ ಮೂವರನ್ನು ಇತರ ಐಸಿಯೂ ವಾರ್ಡ್ಗಳಲ್ಲಿ ದಾಖಲಿಸಲಾಗಿತ್ತು.
ಮೃತ ಕುಟುಂಬಸ್ಥರು ಸಾವಿಗೆ ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ದೂಷಿಸಿದ್ದರಿಂದ ಉದ್ವಿಗ್ನತೆಗೆ ಕಾರಣವಾಗಿದೆ. ಸರಿಯಾದ ಪ್ರಮಾಣದ ಆಮ್ಲಜನಕದ ಪೂರೈಕೆಯನ್ನು ಖಾತ್ರಿಪಡಿಸಿಕೊಳ್ಳದೆ ಆಸ್ಪತ್ರೆಯ ಅಧಿಕಾರಿಗಳು ರೋಗಿಗಳ ಜೀವದ ಜೊತೆ ಆಟವಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಯಾವುದೇ ಆಮ್ಲಜನಕದ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವೈದ್ಯರು ಹೇಳಿದ್ದು ತಂತ್ರಜ್ಞರು ಸಮಸ್ಯೆ ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದ್ದರೂ ಎಂದು ರೋಗಿಯ ಸಂಬಂಧಿಕರೊಬ್ಬರು ಹೇಳಿದರು.