ಬೈಂದೂರು: ಆಯುರ್ವೇದ ಕಾಲೇಜಿನ ಅಂತಿಮ ವರ್ಷದ ಬಿಇಎಮ್ಎಸ್ ವಿದ್ಯಾರ್ಥಿನಿ ಆತ್ಮಹತ್ಯೆ
ಬೈಂದೂರು ಎ.17: ಬಿ.ಇ ಎಮ್.ಎಸ್ ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಂದೂರಿನಲ್ಲಿ ನಡೆದಿದೆ.
ರಕ್ಷಿತಾ (22) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಇವರು ಉದ್ಯಾವರದ ಆಯುರ್ವೇದಿಕ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಇ ಎಮ್.ಎಸ್ ವ್ಯಾಸಂಗ ಮುಗಿಸಿ ಒಂದು ವಾರದ ಹಿಂದೆ ಮನೆಗೆ ಬಂದಿದ್ದು. ಎ.16 ರಂದು ರಾತ್ರಿ 1.30 ಕ್ಕೆ ಬಿ.ಇ ಎಮ್.ಎಸ್ ಅಂತಿಮ ವರ್ಷದ ಫಲಿತಾಂಶವನ್ನು ಆನ್ ಲೈನ್ ನಲ್ಲಿ ಮನೆಯವರೊಂದಿಗೆ ಸೇರಿ ನೋಡಿದ್ದು ರಕ್ಷಿತಾ ಅವರು ಒಂದು ವಿಷಯದಲ್ಲಿ ಅನುತ್ತೀರ್ಣರಾಗಿರುತ್ತಾರೆ.
ಇದೇ ವಿಷಯಕ್ಕೆ ಮನನೊಂದು ಬೇಸರದಲ್ಲಿ ರಾತ್ರಿ 02:00 ಗಂಟೆಗೆ ಮಲಗಿಕೊಂಡಿದ್ದು ಬೆಳಿಗ್ಗೆ 06:30 ಗಂಟೆಗೆ ಎದ್ದು ನೋಡಿದಾಗ ರಕ್ಷಿತಾ ಇಲ್ಲದೇ ಇರುವುದು ತಿಳಿದು ಬಂದಿದೆ.ಈ ವೇಳೆ ಹುಡುಕಾಡಿದಾಗ ರಕ್ಷಿತಾರ ಮೃತದೇಹದ ಮನೆಯ ಎದುರಿನ ಬಾವಿಯಲ್ಲಿ ಪತ್ತೆಯಾಗಿದೆ.
ರಕ್ಷಿತಾ ಅವರು ಒಂದು ವಿಷಯದಲ್ಲಿ ಅನುತ್ತೀರ್ಣಳಾಗಿದ್ದ ವಿಷಯಕ್ಕೆ ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.