ತಾಯಿಯೊಂದಿಗೆ ಮೊಬೈಲ್ ವಿಚಾರಕ್ಕೆ ಜಗಳ- ಪೆರಂಪಳ್ಳಿಯ ಅಪ್ರಾಪ್ತ ಯುವತಿ ನಾಪತ್ತೆ

ಉಡುಪಿ ಎ.17(ಉಡುಪಿ ಟೈಮ್ಸ್ ವರದಿ): ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಪೆರಂಪಳ್ಳಿಯಲ್ಲಿ ನಡೆದಿದೆ. ಅವಿನ (16) ನಾಪತ್ತೆಯಾದ ಯುವತಿ.

ಈಕೆ ತನ್ನ ತಾಯಿಯೊಂದಿಗೆ ಮೊಬೈಲ್ ವಿಚಾರಕ್ಕೆ ಸಂಬಂಧಿಸಿ ಜಗಳ ಮಾಡಿಕೊಂಡಿದ್ದು, ಎ.13 ರ ರಾತ್ರಿ 10.30 ರಿಂದ ಎ.14 ರ ಬೆಳಿಗ್ಗೆ 5.45ರ ಅವಧಿಯಲ್ಲಿ ಮನೆಯಿಂದ ಹೋಗಿದ್ದಾಳೆ. ಅಥವಾ ಆಕೆಯನ್ನು ಯಾರೋ ಪುಸಲಾಯಿಸಿ ಕರೆದುಕೊಂಡು ಹೋಗಿರಬಹುದು ಎಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಯುವತಿ 5 ಅಡಿ ಎತ್ತರ ಇದ್ದು, ಗೋದಿ ಮೈ ಬಣ್ಣ, ದುಂಡು ಮುಖ, ದಪ್ಪ ಶರೀರ ಹೊಂದಿದ್ದಾಳೆ. ಈಕೆ ಕನ್ನಡ ಭಾಷೆ ಮಾತನಾಡುತ್ತಾಳೆ. ಇವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಕೂಡಲೇ ಮಣಿಪಾಲ ಪೊಲೀಸ್ ಠಾಣೆ, ಕಂಟ್ರೋಲ್ ರೂಂ ನಂ 9480805448, 9480805475, 0820-2570328 ನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. 

Leave a Reply

Your email address will not be published. Required fields are marked *

error: Content is protected !!