ಉಡುಪಿಯ ಪ್ರಸಿದ್ಧ ಡಾ.ಅನು ಡೆಂಟಲ್ ಕೇರ್’ನ 2ನೇ ನೂತನ ಕ್ಲಿನಿಕ್ ಎ.18 ರಂದು ಅಂಬಲಪಾಡಿಯಲ್ಲಿ ಉದ್ಘಾಟನೆ
ಉಡುಪಿ ಎ.17(ಉಡುಪಿ ಟೈಮ್ಸ್ ವರದಿ): ನಗರದ ಪ್ರಸಿದ್ಧ ಡಾ. ಅನು ಡೆಂಟಲ್ ಕೇರ್ ರವರ ಮತ್ತೊಂದು ನೂತನ ಕ್ಲಿನಿಕ್ ಎ.18 ರಂದು ಬೆಳಿಗ್ಗೆ 10 ಗಂಟೆಗೆ ಅಂಬಲಪಾಡಿಯ ಮೆಂಡನ್ಸ್ ಗಿರಿಜಾ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ.
ಈ ನೂತನ ಕ್ಲಿನಿಕ್ ಗೆ ಅಂಬಲಪಾಡಿ ಶ್ರೀಮಹಾಕಾಳಿ ಜನಾರ್ಧನ ದೇವಸ್ಥಾನದ ಧರ್ಮದರ್ಶಿ ಡಾ. ಎನ್.ಬಿ. ವಿಜಯ ಬಳ್ಳಾಲ್ ದೀಪ ಬೆಳಗಿಸಿ ಚಾಲನೆ ನೀಡಲಿದ್ದಾರೆ. ಕ್ಲಿನಿಕ್ನ ಡೆಂಟಲ್ ಯುನಿಟ್ ನ್ನು ಕಾರ್ತಿಕ್ ಗ್ರೂಪ್ ಆಫ್ ಕನ್ಸರ್ನ್ಸ್ ನ ಮ್ಯಾನೆಜಿಂಗ್ ಪಾರ್ಟ್ನರ್ ಹರಿಯಪ್ಪ ಕೋಟ್ಯಾನ್ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಂಬಲಪಾಡಿಯ ನಗರ ಸಭಾ ಸದಸ್ಯ ಹರೀಶ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಈಗಾಗಲೇ ಇವರ ಒಂದು ಕ್ಲಿನಿಕ್ ಉಡುಪಿಯ ವಿದ್ಯಾರಣ್ಯ ಮಾರ್ಗದಲ್ಲಿರುವ (ಅಲಂಕಾರ್ ಚಿತ್ರಮಂದಿರದ ಹಿಂಬದಿ) ಮಹಾಲಸಾ ವಾಣಿಜ್ಯ ಸಂಕೀರ್ಣದಲ್ಲಿ ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಇದು ಉತ್ತಮ ಸೇವೆ ನೀಡುವ ಮೂಲಕ ಪ್ರಸಿದ್ಧಿ ಪಡೆದಿದೆ. ಇದೀಗ ಇವರ ಮತ್ತೊಂದು 2 ನೇ ಕ್ಲಿನಿಕ್ ಇದೇ ಬಾನುವಾರ ಅಂಬಲಪಾಡಿ ಮೆಂಡನ್ಸ್ ಗಿರಿಜಾ ಕಟ್ಟಡದಲ್ಲಿ ಆರಂಭಗೊಳ್ಳುತ್ತಿದೆ. ಉಡುಪಿಯ ವಿದ್ಯಾರಣ್ಯ ಮಾರ್ಗದಲ್ಲಿರುವ (ಅಲಂಕಾರ್ ಚಿತ್ರಮಂದಿರದ ಹಿಂಬದಿ) ಡಾ. ಅನು ಡೆಂಟಲ್ ಕೇರ್ ರೋಗಿಗಳ ಅತ್ಯುತ್ತಮ ಆರೈಕೆ ಮತ್ತು ಉತ್ತಮ ಸೇವೆ ನೀಡುವಲ್ಲಿ ಈಗಾಗಲೇ ಹೆಸರುವಾಸಿಯಾಗಿದೆ. ಈ ಕ್ಲಿನಿಕ್ ನಲ್ಲಿ ಪರಿಣಿತ ದಂತ ವೈದ್ಯರ ತಂಡ ಇದ್ದು, ಇವರು ಡೆಂಟಲ್ ಎಕ್ಸಾಮಿನೇಷನ್ ಸೇರಿ ವಿವಿಧ ಬಗೆಯ ವೈದ್ಯಕೀಯ ಸೇವೆಗಳನ್ನು ನೀಡುತ್ತಾರೆ.
ಈ ಕ್ಲಿನಿಕ್ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1, ಸಂಜೆ 4 ರಿಂದ 7 ಗಂಟೆವರೆಗೆ ತೆರೆದಿರುತ್ತದೆ. ಭಾನುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ತೆರೆದಿರುತ್ತದೆ ಎಂದು ಕ್ಲಿನಿಕ್ನ ಮಾಲಕ ಸುನಿಲ್ ಸಾಲಿಯಾನ್ ಕಡೆಕಾರ್ ಮಾಹಿತಿ ನೀಡಿದ್ದಾರೆ.