ನಗದಿನೊಂದಿಗೆ ಟಿಪ್ಪರ್ ಚಾಲಕ ಪರಾರಿ!ಮಾಲಕನಿಗೆ ಮೂರು ನಾಮ!
ಶಂಕರನಾರಾಯಣ: ಜಲ್ಲಿ ಲೋಡು ಮಾಡಿಕೊಂಡು ಬರುವುದಾಗಿ ಹೇಳಿ ಹಣ ಪಡೆದು ವಂಚಿಸಿರುವ ಘಟನೆ ಶಂಕರ ನಾರಾಯಣದಲ್ಲಿ ನಡೆದಿದೆ.
ಟಿಪ್ಪರ್ ಮಾಲೀಕ ವಸಂತ ಕುಮಾರ್ ಶೆಟ್ಟಿ ವಂಚನೆಗೆ ಒಳಗಾದವರು. ಇವರ ಟಿಪ್ಪರ್ ಚಾಲಕನಾದ ಲಿಂಗಪ್ಪ ಯು. ಫೆ.17 ರಂದು ಬೆಳಿಗ್ಗೆ ಕುಂದಾಪುರದ ಶಂಕರನಾರಾಯಣದ ಕೊಂಡಳ್ಳಿ ವಸಂತ ಕುಮಾರ್ ಶೆಟ್ಟಿ ಮನೆಗೆ ಲಾರಿಯನ್ನು ಚಲಾಯಿಸಿಕೊಂಡು ಬಂದು ಜಲ್ಲಿ ಲೋಡು ಮಾಡಿಕೊಂಡು ಬರುವುದಾಗಿ ಹೇಳಿ 25,000 ರೂ ತೆಗೆದುಕೊಂಡು ಹೋಗಿದ್ದು. ಬಳಿಕ ಲಾರಿಯನ್ನು ಹುಣ್ಸೆಮಕ್ಕಿ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿ ಪರಾರಿಯಾಗಿರುತ್ತಾನೆ. ಮಾತ್ರವಲ್ಲದೆ ಈ ಸಂದರ್ಭ ಲಾರಿಯಲ್ಲಿ ಇದ್ದ ಡಿಸೇಲ್ನ್ನು ಕಳವು ಮಾಡಿಕೊಂಡು ಹೋಗಿರುತ್ತಾನೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.