ಬ್ರಹ್ಮಾವರ: ಬ್ಯಾಂಕ್ ಮ್ಯಾನೇಜರ್ ಮನೆಗೆ ಕನ್ನ ಹಾಕಿದ ಖದೀಮರು

ಬ್ರಹ್ಮಾವರ: ಮನೆಗೆ ನುಗ್ಗಿದ ಕಳ್ಳರು ನಗ ನಗದು ದೋಚಿ ಪರಾರಿಯಾಗಿರುವ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ಸಿಂಡಿಕೇಟ್ ರೈತರ ಸಂಘದ ಕರ್ಜೆ ಶಾಖೆಯ ಶಾಖಾಧಿಕಾರಿ ಶಂಕರ ಪೂಜಾರಿ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ.

ಸುಮಾರು 10 ದಿನಗಳಿಂದ ತನ್ನ ಕುಟುಂಬದೊಂದಿಗೆ ಹೊಸೂರು ಗ್ರಾಮದ ಕರ್ಜೆಯಲ್ಲಿರುವ ಸಂಜೀವ ಪೂಜಾರಿ ಎಂಬವರ ಬಾಡಿಗೆ ಮನೆಯಲ್ಲಿ ವಾಸಮಾಡಿಕೊಂಡಿದ್ದರು. ಸ್ವಂತ ಊರಿನಲ್ಲಿ ಹಬ್ಬ ಇದ್ದುದರಿಂದ ಅವರು ಎ.15 ರಂದು ಸಂಜೆ ಬಾಡಿಗೆ ಮನೆಗೆ ಬೀಗ ಹಾಕಿ ಹೋಗಿದ್ದರು. ಬಳಿಕ ಇಂದು ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ಮನೆಯ ಮುಂದಿನ ಬಾಗಿಲಿಗೆ ಹಾಕಿದ ಚಿಲಕವನ್ನು ಮುರಿದು‌ ಬಾಗಿಲನ್ನು ತೆರೆದು ಒಳಗೆ ಪ್ರವೇಶಿಸಿದ ಕಳ್ಳರು,  ಮನೆಯ ಕೋಣೆಯಲ್ಲಿದ್ದ ಕಪಾಟಿನ ಚಿಲಕವನ್ನು ಜಖಂಗೊಳಿಸಿ ಅದರಲ್ಲಿದ್ದ  ನಗದು ರೂ. 16,000 ಹಣವನ್ನು ಹಾಗೂ ಮಗನಿಗೆ ಉಡುಗೋರೆ ಬಂದ ಸುಮಾರು ½ ಗ್ರಾಂ. ನ 2 ಚಿನ್ನದ ಉಂಗುರ ಹಾಗೂ ಮಗುವಿನ ಬೆಳ್ಳಿಯ ಕಾಲು ಚೈನು ಮತ್ತು ಸೊಂಟದ ಬೆಳ್ಳಿಯ ಸರಪಳಿಯನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಕಳವಾದ ನಗದು, ಚಿನ್ನ, ಬೆಳ್ಳಿ ಆಭರಣಗಳ ಒಟ್ಟು ಮೌಲ್ಯ ಸುಮಾರು ರೂ. 21,000 ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!