ಅಮೆರಿಕದ ಹಡ್ಸನ್ ನದಿಯಲ್ಲಿ ಭಾರತ ಮೂಲದ ಗಣಿತಜ್ಞರ ಮೃತದೇಹ ಪತ್ತೆ
ನ್ಯೂ ಯಾರ್ಕ್: ಅಮೆರಿಕದ ಹಡ್ಸನ್ ನದಿಯಲ್ಲಿ ಭಾರತ ಮೂಲದ ಗಣಿತಜ್ಞರೊಬ್ಬರ ಮೃತದೇಹ ಪತ್ತೆಯಾಗಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
31 ವರ್ಷ ವಯಸ್ಸಿನ ಶುವ್ರೊ ಬಿಸ್ವಾಸ್ ಮೃತಪಟ್ಟವರು. ಇವರು ಸ್ವಯಂ ಉದ್ಯೋಗಿಯಾಗಿದ್ದು ಕ್ರಿಪೆÇ್ಟಕರೆನ್ಸಿ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಸದ್ಯ ಪ್ರಕರಣದಲ್ಲಿ ಯಾವುದೇ ಅನುಮಾನಾಸ್ಪದ ವಿಚಾರಗಳು ಕಂಡುಬಂದಿಲ್ಲ. ಮೃತರು ಕಳೆದ ಒಂದು ವರ್ಷದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಸಾವಿನ ಕಾರಣವನ್ನು ತಿಳಿಯಲು ಮರಣೋತ್ತರ ಪರೀಕ್ಷೆಯ ವರದಿಯ ನಿರೀಕ್ಷೆಯಲ್ಲಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ನ್ಯೂ ಯಾರ್ಕ್ ಪೊಲೀಸರು ತಿಳಿಸಿದ್ದಾರೆ.
ಒಂದು ವರ್ಷದಿಂದ ಶುವ್ರೊನ ವರ್ತನೆಯಲ್ಲಿ ಬದಲಾವಣೆಗಳು ಕಂಡುಬಂದಿದ್ದು, ಈ ಬಗ್ಗೆ ಮಾನಸಿಕ ತಜ್ಞರ ಸಹಾಯ ಪಡೆಯಲು ಎಷ್ಟು ಹೇಳಿದರೂ ಆತ ಒಪ್ಪಿರಲಿಲ್ಲ. ನರರೋಗತಜ್ಞರ ಬಳಿ ಚಿಕಿತ್ಸೆಗಾಗಿ ಹೋಗುತ್ತಿದ್ದ. ಆದರೆ ಅದರ ಕಾರಣ ಗೊತ್ತಿಲ್ಲ ಎಂದು ಮೃತ ಶುವ್ರೊನ ಸೋದರ ಬಿಪೆÇ್ರಜಿತ್ ಬಿಸ್ವಾಸ್ ಹೇಳಿದ್ದಾರೆ ಎನ್ನಲಾಗಿದೆ.
ಇನ್ನು ಫೆಬ್ರವರಿಯಲ್ಲಿ ಶುವ್ರೊ ವಾಸಿಸುತ್ತಿದ್ದ ವೆಸ್ಟ್ 37 ಸ್ಟ್ರೀಟ್ ಅಪಾರ್ಟ್ ಮೆಂಟಿನವರು ಆತ ವಿಚಿತ್ರವಾಗಿ ವರ್ತಿಸುತ್ತಾ ನೂಯಿಸೆನ್ಸ್ ಮಾಡುತ್ತಿದ್ದಾನೆ ಎಂದು ಹೇಳಿ, ಆತನನ್ನು ಮನೆಯಿಂದ ಹೊರಹಾಕಬೇಕೆಂದು ಮ್ಯಾನ್ ಹಟನ್ ಕೋರ್ಟ್ ಮೆಟ್ಟಿಲೇರಿದ್ದರು. ಸುಮ್ಮಸುಮ್ಮನೆ ಪೊಲೀಸರಿಗೆ ಕರೆ ಮಾಡುತ್ತಿದ್ದ ಶುವ್ರೋ, ಮನೆಯ ಒಳಗೆ ಹಾಸಿಗೆಗೆ ಬೆಂಕಿ ಹಚ್ಚಿದ್ದ, ಜನರಿಗೆ ಚಾಕು ತೋರಿಸಿದ್ದ, ಲಿಫ್ಟ್ ಒಳಗೆ ರಕ್ತ ಮೆತ್ತಿದ್ದ ಎಂಬುದಾಗಿ ಅಪಾರ್ಟ್ ಮೆಂಟಿನವರು ಆಪಾದಿಸಿದ್ದರು ಎನ್ನಲಾಗಿದೆ ಎಂದು ವರದಿಯಾಗಿದೆ.