ಉಡುಪಿ: ಬ್ಯಾಂಕ್ ಸಿಬಂದಿಗಳಿಗೆ ಕೋವಿಡ್ ಪಾಸಿಟಿವ್ ಸೋಂಕು- 3 ಶಾಖೆ ಸ್ಯಾನಿಟೈಸೇಶನ್
ಉಡುಪಿ,ಎ.16 (ಉಡುಪಿ ಟೈಮ್ಸ್ ವರದಿ): ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಅನೇಕ ಕಚೇರಿ, ಸಂಸ್ಥೆಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಅದರಂತೆ ಉಡುಪಿಯ ರಥಬೀದಿಯ ಕೆನರಾ ಬ್ಯಾ0ಕ್ ಶಾಖೆ (ಹಿಂದಿನ ಸಿ0ಡಿಕೇಟ್ ಬ್ಯಾ0ಕ್) ಶಿರ್ವದ ಶ0ಕರಪುರ ಶಾಖೆ ಹಾಗೂ ಉಡುಪಿ ನಗರದ ಕ್ಯಾಥೋಲಿಕ್ ಸೆ0ಟರ್ ಶಾಖೆಯಲ್ಲಿನ ಹಲವು ಸಿಬ್ಬ0ಧಿಗಳಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಈ ಹಿನ್ನೆಲೆ ಕಚೇರಿಯಲ್ಲಿ ಉಳಿದ ಸಿಬ್ಬಂದಿಗಳು ಹಾಗೂ ಬ್ಯಾಂಕ್ಗೆ ಬರುವ ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಇಂದು ಬ್ಯಾಂಕ್ ಶಾಖೆಗಳಲ್ಲಿ ಸ್ಯಾನಿಟೈಸೇಶನ್ ಮಾಡಲಾಯಿತು. ಈ ಕಾರಣದಿಂದ ಇಂದು ಮಧ್ಯಾಹ್ನ 2 ಗಂಟೆಯ ನಂತರ ಬ್ಯಾಂಕ್ ವ್ಯವಹಾರವನ್ನು ಸ್ಥಗಿತಗೊಳಿಸಲಾಗಿತ್ತು.