ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾಗತಿಕ ಮಟ್ಟದ್ದಾಗಿದೆ: ಪ್ರಧಾನಿ ಮೋದಿ
ಅಹ್ಮದಾಬಾದ್: ಭಾರತದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಭವಿಷ್ಯದ್ದಾಗಿದ್ದು, ಜಾಗತಿಕ ಮಟ್ಟದ್ದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತೀಯ ವಿಶ್ವವಿದ್ಯಾಲಯಗಳ ಸಂಘ 95 ನೇ ವಾರ್ಷಿಕ ಸಭೆ ಹಾಗೂ ಉಪಕುಲಪತಿಗಳ ರಾಷ್ಟ್ರೀಯ ಸೆಮಿನಾರ್ ನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, “ಭಾರತ ಆತ್ಮನಿರ್ಭರತೆಯ ಪಥದಲ್ಲಿ ಸಾಗುತ್ತಿದ್ದು ಕೌಶಲ್ಯ ಹೊಂದಿರುವ ಯುವಕರ ಪಾತ್ರ ನಿರಂತರವಾಗಿ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ”.
ಸ್ವಾತಂತ್ರ್ಯ ನಂತರ ಪ್ರಜಾಪ್ರಭುತ್ವ ಮೌಲ್ಯಗಳನ್ನು ಮುಂದುವರೆಸಲು ಬಾಬಾ ಸಾಹೇಬ್ ಅಂಬೇಡ್ಕರ್ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ ಎಂದು ಅಂಬೇಡ್ಕರ್ ಅವರನ್ನು ಅವರ ಜನ್ಮದಿನಾಚರಣೆಯಂದು ಸ್ಮರಿಸಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್, ಗುಜರಾತ್ ಗೌರ್ನರ್ ಆಚಾರ್ಯ ದೇವವ್ರತ್, ಸಿಎಂ ವಿಜಯ್ ರುಪಾನಿ ಭಾಗಿಯಾಗಿದ್ದರು.