ಗೋವಾ ಬಿಜೆಪಿಗೆ ಬಿಗ್ ಶಾಕ್: ಎನ್ ಡಿಎಯಿಂದ ಹೊರ ಬಂದ ಜಿಎಫ್ ಪಿ

ಪಣಜಿ: ಗೋವಾ ರಾಜ್ಯ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದ್ದು ಎನ್ ಡಿಎ ಮೈತ್ರಿಕೂಟದಿಂದ ಗೋವಾ ಫಾರ್ವರ್ಡ್ ಪಾರ್ಟಿ(ಜಿಎಫ್ಪಿ) ಹೊರಕ್ಕೆ ಬಂದಿದೆ. 

ಬಿಜೆಪಿ ಗೋವಾ ವಿರೋಧಿ ನೀತಿಯೇ ಎನ್ ಡಿಎಯಿಂದ ಹೊರಬರಲು ಪ್ರಮುಖ ಕಾರಣ ಎಂದು ಜಿಎಫ್ಪಿ ಅಧಿಕೃತವಾಗಿ ಘೋಷಿಸಿದೆ. 

40 ಸ್ಥಾನಗಳನ್ನು ಹೊಂದಿರುವ ಗೋವಾ ವಿಧಾನಸಭೆಯಲ್ಲಿ ಗೋವಾ ಫಾರ್ವರ್ಡ್ ಪಾರ್ಟಿ ಮೂರು ಸ್ಥಾನಗಳನ್ನು ಹೊಂದಿದೆ. 2017ರಲ್ಲಿ ಜಿಎಫ್ಪಿ ಪಕ್ಷ ದಿ.ಮನೋಹರ್ ಪರಿಕ್ಕರ್ ಅವರನ್ನು ಗೋವಾ ಮುಖ್ಯಮಂತ್ರಿ ಮಾಡುವ ನಿಟ್ಟಿನಲ್ಲಿ ಎನ್ ಡಿಎ ಗೆ ಬೆಂಬಲ ಸೂಚಿಸಿತ್ತು. 

2019ರಲ್ಲಿ ಮನೋಹರ್ ಪರಿಕ್ಕರ್ ನಿಧನರಾದ ಬಳಿಕ ಜಿಎಫ್ ಸಿ ಹಾಗೂ ಬಿಜೆಪಿ ಸಂಬಂಧದ ನಡುವೆ ಮೈಮನಸ್ಸು ಮೂಡಿತು. ಸಿಎಂ ಪ್ರಮೋದ ಸಾವಂತ್ ಸಂಪುಟದಲ್ಲಿ ಜಿಎಫ್ ಪಿ ನಾಯಕರನ್ನು ಕೈಬಿಟ್ಟಿದ್ದು ಉಭಯ ಪಕ್ಷಗಳ ನಡುವಿನ ಸಂಬಂಧಕ್ಕೆ ಹಳಸಲು ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!