ಡಿಕೆ ಶಿವಕುಮಾರ್ ಸಾಗುತ್ತಿರುವ ಹಡಗಿಗೆ ರಂಧ್ರ ಕೊರೆಯುತ್ತಿದ್ದಾರೆ ಸಿದ್ದರಾಮಯ್ಯ-ಬಿಜೆಪಿ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಾಗುತ್ತಿರುವ ಹಡಗಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಂಧ್ರ ಕೊರೆಯುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹಡಗು ತೂತಾಗಿದೆ ಎನ್ನುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ನೀವು ಮಾಡುತ್ತಿರುವುದಾದರೂ ಏನು?, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಾಗುತ್ತಿರುವ ಹಡಗಿಗೆ ನೀವು ರಂಧ್ರ ಕೊರೆಯುತ್ತಿರುವುದು ಯಾರಿಗೂ ತಿಳಿಯದ ವಿಚಾರವೇನಲ್ಲ’ ಎಂದು ವಾಗ್ದಾಳಿ ನಡೆಸಿದೆ.
ನೀವು (ಸಿದ್ದರಾಮಯ್ಯನವರೇ) ಮುಳುಗುತ್ತಿರುವ ಕಾಂಗ್ರೆಸ್ ಪಕ್ಷದ ಹಡಗಿನತ್ತ ಮೊದಲು ಗಮನಹರಿಸಿ ಎಂದು ಬಿಜೆಪಿ ಟಾಂಗ್ ನೀಡಿದೆ. ಕಾಂಗ್ರೆಸ್ ಪಕ್ಷ ಅಧಿಕಾರ ಇಲ್ಲದಿದ್ದಾಗ ಕುತಂತ್ರ, ಷಡ್ಯಂತ್ರ ಮತ್ತು ವಿಡಿಯೋ ರಾಜಕಾರಣ ಮಾಡುತ್ತವೆ. ಸೋಲಿನ ಹತಾಶೆಯಿಂದ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ.
ರಾಜ್ಯದ ಮೂರೂ ಸ್ಥಾನಗಳು ಬಿಜೆಪಿ ಪಾಲಾಗಲಿವೆ. ಈ ಮೂಲಕ ಸಿದ್ದರಾಮಯ್ಯ ಅವರು ಅಡ್ರಸ್ ಇಲ್ಲದ ನಾಯಕರಾಗಲಿದ್ದಾರೆ ಎಂದು ಟೀಕಿಸಿದೆ.