ಮಾಜಿ ಸಚಿವ ಯುಟಿ ಖಾದರ್ ಕಾರು ಅಪಘಾತ, ಪ್ರಾಣಾಪಾಯದಿಂದ ಪಾರು

ದಾವಣಗೆರೆ: ಮಾಜಿ ಸಚಿವ ಯುಟಿ ಖಾದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು ಅದೃಷ್ತವಶಾತ್ ಖಾದರ್ ಅವರಿಗೆ ಯಾವ ಪ್ರಾಣಾಪಾಯವಾಗಿಲ್ಲ.

ದಾವಣಗೆರೆಯ ಅನಗೋಡು ಬಸ್ ನಿಲ್ದಾಣದ ಸಮೀಪ ಖಾದರ್ ಅವರ ಕಾರು ಹಾಗೂ ಕಂಟೈನರ್ ನಡುವೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಈ ವೇಳೆ ಇನ್ನೋವಾ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ.

ಘಟನೆ ನಂತರ ಬೆಳಗಾವಿ ಲೋಕಸಭೆ ಉಪಚುನಾವಣೆ ಪ್ರಚಾರಕ್ಕೆ ತೆರಳುತ್ತಿದ್ದ ಖಾದರ್ ಬೆಂಗಳೂರಿಗೆ ಹಿಂತಿರುಗಿದ್ದಾರೆ. ಸ್ಥಳಕ್ಕೆ ಎಸ್.ಪಿ. ಹನುಮಂತರಾಯ ತೆರಳಿ ಪರಿಶೀಲನೆ ನಡೆಸಿದ್ದಾರೆ,

Leave a Reply

Your email address will not be published. Required fields are marked *

error: Content is protected !!