ಅಮೇರಿಕಾದ ಜನಪ್ರಿಯ ಗಾಯಕಿ ಮೇರಿ ಮಿಲ್ಬೆನ್ ಸಂಸ್ಕೃತ ಶ್ಲೋಕ ಪಠಿಸಿ ಯುಗಾದಿಯ ಶುಭಾಶಯ
ನವದೆಹಲಿ, ಏ.13: ಯುಗಾದಿ ಭಾರತೀಯರ ಪಾಲಿಗೆ ಹೊಸ ವರ್ಷವನ್ನು ಸ್ವಾಗತಿಸುವ ಹಬ್ಬ. ಹೊಸ ವರುಷದ ಈ ಹಬ್ಬಕ್ಕೆ ಅನೇಕ ಗಣ್ಯರು ಜನತೆಗೆ ಶುಭಕೋರಿದ್ದಾರೆ. ಇದೀಗ ದೇಶದ ಗಡಿಯಾಚೆಯಿಂದಲೂ ಭಾರತೀಯರಿಗೆ ಹೊಸ ವರುಷದ ಶುಭ ಸಂದೇಶ ಸಿಕ್ಕಿದೆ. ಅಮೇರಿಕಾದ ಜನಪ್ರಿಯ ಗಾಯಕಿ ಮೇರಿ ಮಿಲ್ಬೆನ್ ಅವರು ಸಂಸ್ಕೃತ ಶ್ಲೋಕವನ್ನು ಪಠಿಸಿ ಭಾರತೀಯರಿಗೆ ಹೊಸ ವರುಷವೆಂದೇ ಆಚರಿಸಲಾಗುವ ಯುಗಾದಿಯ ಶುಭಾಶಯ ತಿಳಿಸಿದ್ದಾರೆ.
ತಾವು ಶುಭಾಶಯ ತಿಳಿಸಿರುವ ವಿಡಿಯೋದಲ್ಲಿ ಆರಂಭದಲ್ಲಿ ಸಂಸ್ಕøತ ಶ್ಲೋಕವನ್ನು ಪಠಿಸಿ ಹಿಂದಿಯಲ್ಲೇ ಶುಭಾಶಯ ತಿಳಿಸಿದ್ದಾರೆ. ಈ ವಿಡಿಯೋದೊಂದಿಗೆ ಟ್ವೀಟ್ ಮಾಡಿರುವ ಅವರು, ”ನನ್ನ ಪ್ರೀತಿಯ ಭಾರತೀಯರಿಗೆ ಹಾಗೂ ಭಾರತೀಯ-ಅಮೇರಿಕನ್ ಸಮುದಾಯ ಹಾಗೂ ವಿಶ್ವದಾದ್ಯಂತ ನೆಲೆಸಿರುವ ಭಾರತೀಯ ಸಮುದಾಯಗಳಿಗೆ ಹೊಸ ವರ್ಷದ ಶುಭಾಶಯಗಳು. ಇಂದು, ಹೊಸ ವರ್ಷದ ಹುಮ್ಮಸ್ಸನಿಂದ ನೀವು ಆಶೀರ್ವದಿಸಲ್ಪಟ್ಟಿದ್ದೀರಿ ಎಂದು ನನ್ನ ಭಾವನೆ. ಈ ಹೊಸ ವರ್ಷವು ಹೆಚ್ಚು ಸಂತೋಷವನ್ನು ತರಲಿ. ತನ್ನ ಶುಭಾಶಯಗಳು” ಎಂದು ಹೇಳಿದ್ದಾರೆ.