ತೊಕ್ಕೊಟ್ಟು: ಯುವತಿಗೆ ಗುಪ್ತಾಂಗ ಪ್ರದರ್ಶಿಸಿದ್ದ ಕಾಮುಕ ಅರೆಸ್ಟ್
ಮಂಗಳೂರು: ಕೆಲಸಕ್ಕೆ ತೆರಳುತ್ತಿದ್ದ ಯುವತಿಗೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವಕ ಮಾಸ್ಕ್ ಹಾಗೂ ಟೋಪಿ ಧರಿಸಿ ಮೊಬೈಲ್ ನಲ್ಲಿ ಮಾತನಾಡುವ ಸೋಗಿನಲ್ಲಿ ತನ್ನ ಗುಪ್ತಾಂಗ ಪ್ರದರ್ಶಿಸಿರುವ ಘಟನೆ ಮಂಗಳೂರಿನ ತೊಕ್ಕೊಟ್ಟುವಿನಲ್ಲಿ ನಡೆದಿದೆ. ಘಟನೆ ನಡೆದ ಒಂದು ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ.
ಘಟನೆಯಿಂದ ಬೆದರಿದ ಯುವತಿ ಸಮೀಪದಲ್ಲಿದ್ದ ಟೈಲರಿಂಗ್ ಅಂಗಡಿಗೆ ನುಗ್ಗಿ ಸಹಾಯವನ್ನು ಕೋರಿದ್ದಳು.. ಸ್ಥಳದಲ್ಲಿದ್ದ ಜನರಿಗೆ ಅವನ ಕೃತ್ಯದ ಬಗ್ಗೆ ತಿಳಿದಾಗ ಆತ ಸ್ಥಳದಿಂದ ಪರಾರಿಯಾಗಿದ್ದ, ಆ ವೇಳೆ ಅಲ್ಲಿದ್ದವರೊಬ್ಬರು ಯುವಕನ ಫೋಟೋವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದರು.
ಇದಕ್ಕೆ ಮುನ್ನ ಸಹ ಈ ವ್ಯಕ್ತಿ ಮಹಿಳೆಯರೆದುರು ಇಂತಹುದೇ ಕೃತ್ಯ ನಡೆಸಿದ್ದನೆನ್ನಲಾಗಿದ್ದು ಯುವತಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ, ಪೊಲೀಸರು ಒಂದು ಗಂಟೆಯೊಳಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.