ಮುಸ್ಲಿಮರು ಸರಿಯಾಗಿ ರಾಜಕೀಯ ಸ್ಥಾನ ಪಡೆಯಬೇಕಾದರೆ ತಮ್ಮ ಓಟು ಬ್ಯಾಂಕ್ ಗಟ್ಟಿಗೊಳಿಸಿ: ಹೆಮ್ಮಾಡಿ

ಉಡುಪಿ: ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿಯ ನಿರ್ದೇಶನದ ಮೇರೆಗೆ ಉಡುಪಿ ಜಿಲ್ಲಾ ಸಮಿತಿಯು ಹಮ್ಮಿಕೊಂಡ ಮುಸ್ಲಿಂ ಮೀಸಲಾತಿ ಪ್ರಾಯೋಗಿಕವೇ ಎಂಬ ವಿಚಾರಗೋಷ್ಠಿಯು ಬ್ರಹ್ಮಾವರ ಸಿಟಿ ಸೆಂಟರ್ ಹಾಲ್ ನಲ್ಲಿ ನಡೆಯಿತು.
ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ಕೆ ಎಮ್ ಶಾಫಿ ಸಅದಿ ಈ ವಿಚಾರ ಗೋಷ್ಠಿಯನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ನಮ್ಮ ಸಮುದಾಯಕ್ಕೆ ಸಿಗುವ ಮೀಸಲಾತಿಯನ್ನು ಪಡೆಯುವಲ್ಲಿ ನಾವು ವಿಫಲರಾಗಿದ್ದೇವೆ. ನಮ್ಮ ಜನ ಸಂಖ್ಯೆಗೆ ಹೋಲಿಸಿದರೆ ನಮ್ಮಲ್ಲಿ ಇರಬೇಕಾದ ಎಮ್ ಎಲ್ ಎ ಹಾಗೂ ಎಮ್ ಪಿ ಗಳ ಸಂಖ್ಯೆ ಎಷ್ಟು ಎಂಬ ಬಗ್ಗೆ ನಾವು ಚಿಂತನೆ ನಡೆಸಬೇಕಿದೆ ಎಂದರು.

ವಿಚಾರಗೋಷ್ಟಿಯಲ್ಲಿ ಮುಸ್ಲಿಂ ಮೀಸಲಾತಿ ಪ್ರಾಯೋಗಿಕವೇ ಎಂಬ ವಿಷಯದ ಬಗ್ಗೆ ಮಾತನಾಡಿದ ಪತ್ರಕರ್ತ ಶಶಿಧರ ಹೆಮ್ಮಾಡಿ ಅವರು, ಮುಸ್ಲಿಮರು ಸರಿಯಾಗಿ ರಾಜಕೀಯವನ್ನು ಪಡೆಯಬೇಕಾದರೆ ಮುಸ್ಲಿಮರು ಓಟು ಬ್ಯಾಂಕ್ ತಯಾರಿ ಮಾಡಬೇಕು. ಯಾರ ಗುಲಾಮರು ಆಗಬಾರದು ಅಗತ್ಯ ಸಂದರ್ಭಗಳಲ್ಲಿ ಒಕ್ಕೊರಲಿನ ಧ್ವನಿ ಎತ್ತಬೇಕು ಧಾರ್ಮಿಕ ವಿಷಯಕ್ಕೆ ದಕ್ಕೆ ಬಂದಾಗ ಯಾವ ರೀತಿಯಲ್ಲಿ ಪ್ರತಿಭಟಿಸುತ್ತಾರೋ ಇಂತಹ ಸಂದರ್ಭಗಳಲ್ಲೂ ಅಂತಹ ಪ್ರತಿಭಟನೆ ನಡೆಸಬೇಕು ಎಂದರು.
ಜಿಲ್ಲಾ ಅಧ್ಯಕ್ಷ ಬಿ ಎಸ್ ಎಫ್ ರಫೀಕ್ ಗಂಗೊಳ್ಳಿ ರವರು ವಿಚಾರಗೋಷ್ಠಿಯ ಅಧ್ಯಕ್ಷತೆಯ ಅಧ್ಯಕ್ಷತೆ ವಹಿಸಿದ್ದರು.

ಮುಸ್ಲಿಂ ಜಮಾಅತ್ ರಾಜ್ಯ ಸದಸ್ಯರಾದ ಕೆ.ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಹಾಜಿ ಅಬೂಬಕ್ಕರ್ ನೇಜಾರು, ಅಶ್ರಫ್ ಕಿನಾರ, ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಕೆ ಪಿ ಇಬ್ರಾಹಿಂ ಮಟಪಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ.ಬಿ.ಸಿ ಬಶೀರ್ ಅಲಿ ಮೂಳೂರು, ಜಿಲ್ಲಾ ಉಪಾಧ್ಯಕ್ಷ ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ, ಮುಸ್ಲಿಂ ಜಮಾಅತ್ ರಾಜ್ಯ ನಾಯಕ ಪತ್ರಕರ್ತ ಅಬ್ದುಲ್ ಹಮೀದ್ ಬಜ್ಪೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಡ್ವಕೆಟ್ ಇಲ್ಯಾಸ್ ನಾವುಂದ, ಜಿಲ್ಲಾ ಕಾರ್ಯಾಧ್ಯಕ್ಷ ಸುಬ್ಹಾನ್ ಅಹ್ಮದ್ ಹೊನ್ನಾಳ ಹಾಗೂ ಮತ್ತಿತರ ನಾಯಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!