ರಂಝಾನ್ ಚಂದ್ರದರ್ಶನ- ನಾಳೆ(ಎ.13) ಉಪವಾಸ ಆರಂಭ: ಖಾಝಿ ಮಾಣಿ ಉಸ್ತಾದ್
ಉಡುಪಿ: ಸೋಮವಾರ ಸಂಜೆ ರಂಝಾನ್ ತಿಂಗಳ ಪ್ರಥಮ ಚಂದ್ರದರ್ಶನವಾಗಿರುವುದರಿಂದ ಎ.13 ಮಂಗಳವಾರ (ನಾಳೆ) ರಂಝಾನ್ ತಿಂಗಳ ಉಪವಾಸ ಆರಂಭಿಸುವುದಾಗಿ ಉಡುಪಿ,ಹಾಸನ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲಾ ಸಂಯುಕ್ತ ಖಾಝಿ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ತಿಳಿಸಿರುವುದಾಗಿ ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಹಾಜಿ ಪಿ ಅಬೂಬಕ್ಕರ್ ನೇಜಾರು ಹಾಗೂ ಕಾರ್ಯದರ್ಶಿ ಹಾಜಿ ಎಮ್ ಎ ಬಾವು ಮೂಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.