ಪ್ರಾಥಮಿಕ ಕೃಷಿ ಪತ್ತಿನ ಸ. ಸಂಘಗಳ ಕಾರ್ಯದರ್ಶಿ,ಸಿಬ್ಬಂದಿಗಳ ನಿಯಂತ್ರಣಕ್ಕೆ ಹೊಸ ಕಾಯ್ದೆ: ಎಸ್.ಟಿ ಸೋಮಶೇಖರ್

ಕಲಬುರಗಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ (ವಿಎಸ್ ಎಸ್ ಎನ್) ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳ ಮೇಲೆ ನಿಯಂತ್ರಣ ಹೊಂದಲು ಹೊಸ ಕಾಯ್ದೆ ಜಾರಿ ತರಲಾಗುತ್ತಿದೆ ಎಂದು ಸಹಕಾರಿ ಸಚಿವ ಎಸ್. ಟಿ ಸೋಮಶೇಖರ್ ಹೇಳಿದರು.
 ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ( ಡಿಸಿಸಿ) ಬ್ಯಾಂಕ್ ಹಾಗೂ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಹಾಲು  ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು,  ಒಟ್ಟಾರೆ ಸಹಕಾರಿ ಕ್ಷೇತ್ರ ಬಲವರ್ದನೆಗೆ 18 ಬದಲಾವಣೆ ಅಂಶಗಳೊಂದಿಗೆ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮ 1959ನ್ನು ತಿದ್ದುಪಡಿ ಮುಖಾಂತರ ಹೊಸ ಸಹಕಾರಿ ಕಾಯ್ದೆ ಜಾರಿ ತರಲಾಗುತ್ತಿದೆ. ಈಗಾಗಲೇ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲಾಗಿದೆ ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಕಾಯದರ್ಶಿ ಹಾಗೂ ಸಿಬ್ಬಂದಿ ಯಾವುದಾದರೂ ಅವ್ಯವಹಾರ ಮತ್ತು ಕರ್ತವ್ಯ ಲೋಪ ಎಸಗಿದಲ್ಲಿ ಕ್ರಮ ಕೈಗೊಳ್ಳಲು ಜತೆಗೆ ಒಂದು ಸಂಘದಿಂದ ಮತ್ತೊಂದು ಸಂಘಕ್ಕೆ ವರ್ಗಾಯಿಸುವ ಅಂಶಗಳು ಸೇರಿ ಇತರ ಕ್ರಮಗಳನ್ನು ಕೈಗೊಳ್ಳಲು ಈಗ ಡಿಸಿಸಿ ಬ್ಯಾಂಕ್ ಗಳಿಗೆ ಅಧಿಕಾರವಿಲ್ಲ. ಹೀಗಾಗಿ ಆಡಳಿತ ಚುರುಕುಗೊಳಿಸಲು ಹಾಗೂ ಆರ್ಥಿಕ ನಿರ್ವಹಣೆ ಯಲ್ಲಿ ನಿಗಾ ವಹಿಸಲು ಬಹು ಮುಖ್ಯವಾಗಿ ಡಿಸಿಸಿ ಬ್ಯಾಂಕುಗಳ ಆಡಳಿತ ಮಂಡಳಿ ಒತ್ತಾಯ ಹಾಗೂ ಅಭಿಪ್ರಾಯ ಮೇರೆಗೆ ಹೊಸ ಕಾಯ್ದೆ ಜಾರಿ ತರಲಾಗುತ್ತಿದೆ.  ಈ ಕಾಯ್ದೆ ಫ್ಯಾಕ್ಸ್ ಸಿಬ್ಬಂದಿ ಗಳ ವರ್ಗಾವಣೆಗೂ ಅನ್ವಯವಾಗಲಿದ್ದು, ಹೊಸ ಕಾಯ್ದೆಯು ಮುಂದಿನ ತಿಂಗಳು ನಡೆಯುವ ಅಧಿವೇಶನದಲ್ಲಿ ಅಂಗೀಕಾರಗೊಂಡು ಕಾರ್ಯರೂಪಕ್ಕೆ ಬರಲಿದೆ ಎಂದು ಸಚಿವರು ವಿವರಣೆ ನೀಡಿದರು.

Leave a Reply

Your email address will not be published. Required fields are marked *

error: Content is protected !!