ಹನಿಟ್ರ್ಯಾಪ್‍ಗೆ ಬಳಿಸಿಕೊಂಡು ಕೃತ್ಯ ಎಸಗಿದ್ದಾರೆ ಸಂತ್ರಸ್ಥೆ ಹೇಳಿಕೆ: ಯುವತಿ ಪರ ವಕೀಲ ನಿರಾಕರಣೆ

ಬೆಂಗಳೂರು ಏ.12: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ನನ್ನನ್ನು ಹನಿ ಟ್ರ್ಯಾಪ್‍ಗೆ ಬಳಿಸಿಕೊಂಡು ಕೃತ್ಯ ಎಸಗಿದ್ದಾರೆ ಎಂದು ಯುವತಿ ಹೇಳಿಕೆ ನೀಡಿದ್ದಾಳೆ ಎಂಬ ಸ್ಪೋಟಕ ಮಾಹಿತಿ ಹೊರಬೀಳುತ್ತಿದ್ದಂತೆ ಯುವತಿ ಪರ ವಕೀಲ ಈ ಸುದ್ದಿಯನ್ನು ನಿರಾಕರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಡಿ ಪ್ರಕರಣದ ಸಂತ್ರಸ್ಥ ಯುವತಿ ಪರ ವಕೀಲ ಮಂಜುನಾಥ್ ಅವರು, ಸಂತ್ರಸ್ತ ಯುವತಿ ಯಾವುದೇ ರೀತಿಯ ಉಲ್ಟಾ ಹೇಳಿಕೆ ನೀಡಿಲ್ಲ. ಏಪ್ರಿಲ್ 11 ರಂದು ಎಸ್ ಐ ಟಿ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದರು. ನೋಟೀಸ್ ಹಿನ್ನೆಲೆಯಲ್ಲಿ ಯುವತಿ ವಿಚಾರಣೆಗೆ ಹಾಜರಾಗಿದ್ದಾರೆ. ಯುವತಿ ಯಾವುದೇ ಬದಲಾದ ಹೇಳಿಕೆ ನೀಡಿಲ್ಲ. ವಾಟ್ಸಾಪ್ ಚಾಟಿಂಗ್ ಕುರಿತು ಮಾಹಿತಿ ನೀಡಲು ತನಿಖಾಧಿಕಾರಿ ಮುಂದೆ ಹಾಜರಾಗಿದ್ದಾರೆ ಅಷ್ಟೇ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!