ಉಡುಪಿ: ಮಟ್ಟುವಿನ ಯುವಕ ನಾಪತ್ತೆ
ಉಡುಪಿ ಏಪ್ರಿಲ್ 12(ಉಡುಪಿ ಟೈಮ್ಸ್ ವರದಿ): ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಉಡುಪಿಯ ಮಟ್ಟುವಿನಲ್ಲಿ ನಡೆದಿದೆ. ಉಡುಪಿಯ ಮಟ್ಟು ನಿವಾಸಿ ಸಂದೀಪ (30) ನಾಪತ್ತೆಯಾದವರು.
ಇವರು ಏಪ್ರಿಲ್ 4 ರಿಂದ ಕಾಣೆಯಾಗಿದ್ದು, 163 ಸೆಂ.ಮೀ ಎತ್ತರವಿದ್ದು, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ, ದುಂಡು ಮುಖ ಹೊಂದಿದ್ದಾರೆ. ಇವರು ಕನ್ನಡ, ಮರಾಠಿ, ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.