ಎ. 23ರಂದು ‘ವಿಕ್ರಾಂತ್’ ತುಳು ಸಿನಿಮಾ ಬಿಡುಗಡೆ

ಮಂಗಳೂರು: ರಾಧಾ ನಿಸರ್ಗ ಕಂಬೈನ್ಸ್ ಲಾಂಚನದಲ್ಲಿ ತಯಾರಾದ ನವೀನ್ ಮಾರ್ಲ ಕೊಡಂಗೆ ನಿರ್ದೇಶನದ ರಾಜೇಂದ್ರ ಯಶು ಬೆದ್ರೋಡಿ ನಿರ್ಮಾಣದ ವಿಕ್ರಾಂತ್ ತುಳು ಸಿನಿಮಾ  ಎಪ್ರಿಲ್ ೨೩ ರಂದು ಶುಕ್ರವಾರ ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ವಿಕ್ರಾಂತ್ ಸಿನಿಮಾಕ್ಕೆ ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಬಂಟ್ವಾಳ ಪರಿಸರ, ಕಳಸ, ಹೊರನಾಡು, ಉಪ್ಪಿನಂಗಡಿ, ಬಿ.ಸಿ ರೋಡ್ ಮೊದಲಾದ ಕಡೆಗಳಲ್ಲಿ ಸಿನಿಮಾಕ್ಕೆ ಚಿತ್ರೀಕರಣ ನಡೆದಿದೆ ಎಂದು ಚಿತ್ರ ನಿರ್ದೇಶಕ ನವೀನ್ ಮಾರ್ಲ ಕೊಡಂಗೆ ತಿಳಿಸಿದ್ದಾರೆ.

ಈ ಸಿನಿಮಾದಲ್ಲಿ ಬಹುತೇಕ ಯಕ್ಷಗಾನ ಕಲಾವಿದರು ಬಣ್ಣ ಹಚ್ಚಿದ್ದು ವಿಶೇಷ. ಖ್ಯಾತ  ಯಕ್ಷಗಾನ ಕಲಾವಿದೆ ಅರುವ ಕೊರಗಪ್ಪ ಶೆಟ್ಟಿ ಅವರು ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಯಕ್ಷಗಾನ ಕಲಾವಿದರಾದ ರಾಧಾಕೃಷ್ಣ ನಾವಡ ಮಧೂರು, ಬಂಟ್ವಾಳ ಜಯರಾಮ ಆಚಾರ್ಯ, ಕಡಬ ದಿನೇಶ್ ರೈ, ಕೋಡ ಪದವು ದಿನೇಶ್ ಶೆಟ್ಟಿಗಾರ್, ಪೂರ್ಣಿಮಾ ಯತೀಶ್ ರೈ ಮೊದಲಾದವರು ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ರಂಗ ಭೂಮಿಯ ಅರವಿಂದ ಬೋಳಾರ್, ರಮೇಶ್ ರೈ ಕುಕ್ಕುವಳ್ಳಿ ಎಚ್.ಕೆ ನಯನಾಡು, ಕೊಡಮಣ್ಣ್ ಕಾಂತಪ್ಪ ಶೆಟ್ಟಿ. ಅಶೋಕ್ ಭಟ್ ಕಾಪುಕೊಲ್ಯ, ಸುನೀಲ್ ಕೆ. ಆರ್, ಸಂದೀಪ್ ಶೆಟ್ಟಿ ರಾಯಿ, ರಾಕೇಶ್ ಶೆಟ್ಟಿ, ಬಿಸಿ ರೋಡ್, ಸುನೀತಾ ಎಕ್ಕೂರ್, ಪವಿತ್ರ ಹೆಗ್ಡೆ, ಶೃತಿ ಭಟ್ ಇದ್ದಾರೆ. ನಾಯಕ ನಟನಾಗಿ ವಿನೋದ್ ಶೆಟ್ಟಿ ಮತ್ತು ಶೀತಲ್ ನಾಯಕ್ ನಾಯಕಿಯಾಗಿ ಅಭಿನಯಿಸಿದ್ದಾರೆ.

ಸಿನಿಮಾಕ್ಕೆ ರವಿ ಸುವರ್ಣ ಛಾಯಾಗ್ರಹಣ ಒದಗಿಸಿದ್ದಾರೆ. ಸಾಹಿತ್ಯ ಎಚ್.ಕೆ ನಯನಾಡು, ನೃತ್ಯ ನಿರ್ದೇಶನ : ವಿನೋದ್ ರಾಜ್ ಬಂಟ್ವಾಳ, ಅನಿಲ್ ನಾಯಕ್, ಸಂಕಲನ : ಮಹಾಬಲೇಶ್ವರ ಹೊಳ್ಳ, ಕಲೆ: ದಿನೇಶ್ ಸುವರ್ಣ ರಾಯಿ, ಯುನಿಟ್ ಜಿ.ಆರ್.ಕೆ ಸುರತ್ಕಲ್, ಸಂಗೀತ ಸಾಹಿತ್ಯ ಭಾಸ್ಕರ್ ರಾವ್ ಬಿಸಿ ರೋಡ್, ಧ್ವನಿ ಮುದ್ರಣ : ವೈಭವೀ ಆಡಿಯೋ ಸ್ಟುಡಿಯೋ ಬಿ.ಸಿ ರೋಡ್ ಈ ಸಿನಿಮಾಕ್ಕೆ  ಅನುರಾಧ ಭಟ್, ಭಾಸ್ಕರ್ ರಾವ್ ಹಾಗೂ  ಯಕ್ಷಗಾನ ಭಾಗವತ ಗಿರೀಶ್ ರೈ ಕಕ್ಕೆ ಪದವು ಹಾಡಿದ್ದಾರೆ. ಕಥೆ ಸಂಭಾಷಣೆ ನಿರ್ದೇಶನ ನವೀನ್ ಮಾರ್ಲ ಕೊಡಂಗೆ, ತನ್ನ ಸಂಸಾರದ ಬಗ್ಗೆ ಚಿಂತಿಸದೆ, ಸಮಾಜ ಸೇವೆಗೆ ತನ್ನ ಸರ್ವಸ್ವವನ್ನು ಮುಡಿಪಾಗಿಸುವ ಯುವಕನ ಜೀವನದಲ್ಲಿ ನಡೆಯುವ ಘಟನೆಗಳನ್ನು ಬಿಂಬಿಸುವ ಕತೆಯನ್ನು ‘ವಿಕ್ರಾಂತ್’ ಹೊಂದಿದೆ. 

Leave a Reply

Your email address will not be published. Required fields are marked *

error: Content is protected !!