ಬೈಕ್ ಕಳ್ಳನನ್ನು ಹಿಡಿಯಲು ಹೋದ ಪೊಲೀಸ್ ಅಧಿಕಾರಿಯನ್ನೇ ಹೊಡೆದು ಕೊಂದ ಗ್ರಾಮಸ್ಥರು

ಕೋಲ್ಕತ ಏ.10: : ಬೈಕ್ ಕಳ್ಳನನ್ನು ಹಿಡಿಯಲು ಹೋದ ಪೊಲೀಸ್ ಅಧಿಕಾರಿಯನ್ನೇ ಗ್ರಾಮಸ್ಥರ ಗುಂಪೊಂದು ಸೇರಿ ಹೊಡೆದು ಕೊಂದಿರುವ ಘಟನೆ ಪಶ್ಚಿಮ ಬಂಗಾಲದ ಉತ್ತರ ದಿನಾಜ್ ಪುರದಲ್ಲಿ ನಡೆದಿದೆ. ಉತ್ತರ ದಿನಾಜ್‍ಪುರ್ ಜಿಲ್ಲೆಯ ಬಿಹಾರ್ ಕಿಶಾನ್ ಗಂಜ್ ಪೊಲೀಸ್ ಠಾಣೆಯ ಎಸ್ ಎಚ್ ಒ ಅಶ್ವಿನಿ ಕುಮಾರ್ ಕೊಲೆಯಾದ ಪೊಲೀಸ್ ಅಧಿಕಾರಿ.

ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿ ತನಿಖೆಗೆಂದು ಪೊಲೀಸ್ ಅಧಿಕಾರಿ ತೆರಳಿದ್ದರು. ಈ ವೇಳೆ ಗ್ರಾಮಸ್ಥರ ಗುಂಪೊಂದು ಪೊಲೀಸ್ ಅಧಿಕಾರಿಯ ಮೇಲೆ ಮಾಡಿದ್ದು ಅವರು ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಸ್ಥಳೀಯ ಮಾಧ್ಯಮದೊಂದಿಗೆ ಮಾತನಾಡಿದ ಬಿಹಾರ್ ಪೊಲೀಸ್ ಸಂಘದ ಅಧ್ಯಕ್ಷ ಮೃತ್ಯುಂಜಯ್ ಕೆ ಸಿಂಗ್ ಅವರ  ಪೊಲೀಸ್ ರನ್ನು ಹೊಡೆದು ಸಾಯಿಸಿದ್ದು, ಮೃತ ಪೊಲೀಸ್ ಅಧಿಕಾರಿಯ ಮೃತದೇಹವನ್ನು ಪೊಲೀಸರು ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ. ಸದ್ಯ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳಿಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳನನ್ನು ಬಂಧಿಸಲು ಹೋದಾಗ ಈ ಘಟನೆ ನಡೆದಿದೆ. ನಾವು ಬೈಕ್ ಕಳ್ಳನನ್ನು ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಐಜಿ. ಪೂರ್ಣಿಯಾ ರೇಂಜ್ ಪ್ರತಿಕ್ರಿಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!