ನಾಳಿನ ಸಾರಿಗೆ ನೌಕರರ ಬಂದ್’ಗೆ ಖಾಸಗಿ ಬಸ್ ಮಾಲಕರ ಸಂಘ ವಿರೋಧ, ರಾಜ್ಯದಾದ್ಯಂತ ಖಾಸಗಿ ಬಸ್ ಸೇವೆ

ಉಡುಪಿ(ಉಡುಪಿ ಟೈಮ್ಸ್ ವರದಿ): ಕೋವಿಡ್ ಸಂಕಷ್ಟದ ಈ ಅವಧಿಯಲ್ಲಿ ಸಾರಿಗೆ ನೌಕರರು ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ರಾಜ್ಯ ಖಾಸಗಿ ಬಸ್ ಮಾಲಕರ ಸಂಘದ ರಾಜ್ಯ ಖಾಜಾಂಚಿ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸಾರಿಗೆ ಸ್ಥಬ್ದವಾದರೆ ಜನಜೀವನ ಅಸ್ಥವ್ಯಸ್ಥವಾಗುತ್ತದೆ. ಈಗ ಮಕ್ಕಳಿಗೆ ಪರೀಕ್ಷೆಯ ಅವಧಿ, ಅಲ್ಲದೆ ಪ್ರತಿಭಟನೆ ಮಾಡುವುದರಿಂದ ದೈನಂದಿನ ಕೆಲಸಕ್ಕೆ ತೆರಳುವವರಿಗೆ ತುಂಬಾ ಸಮಸ್ಯೆ ಆಗಲಿದೆ. ಆದ್ದರಿಂದ ಕೋವಿಡ್ ಸಂಕಷ್ಟದ ಈ ಅವಧಿಯಲ್ಲಿ ಸಾರಿಗೆ ನೌಕರರು ಪ್ರತಿಭಟನೆ ಮಾಡುವುದು ಸರಿಯಲ್ಲ. ಒಂದು ವೇಳೆ ಸಾರಿಗೆ ನೌಕರರು ಪ್ರತಿಭಟನೆ ಮಾಡುವುದೇ ಆದರೆ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಮಾಡಬೇಕು ಎಂದು ತಿಳಿಸಿದರು.

ಸರಕಾರ ಯಾವುದೇ ಇದ್ದರೂ ಸರಕಾರದೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆ ಹರಿಸಿಕೊಳ್ಳುವುದು ಬಿಟ್ಟು ಸಾರಿಗೆ ನೌಕರರು ಮುಷ್ಕರಕ್ಕೆ ತೆರಳಿದರೆ ಬಹಳ ತೊಂದರೆ ಅಗಲಿದೆ. ಆದ್ದರಿಂದ ಸಾರಿಗೆ ನೌಕರರು ನಾಳೆ ಕರೆ ನೀಡಿರುವ ಮುಷ್ಕರವನ್ನು ಕೈ ಬಿಟ್ಟು ಸರಕಾರದೊಂದಿಗೆ ಮತುಕತೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದ ಅವರು, ರಾಜ್ಯದಲ್ಲಿರುವ 8000 ಖಾಸಗಿ ಬಸ್‍ಗಳು, 20,000 ಮ್ಯಾಕ್ಸಿ ಕ್ಯಾಬ್‍ಗಳು ಹಾಗೂ 4,000 ಆಲ್ ಇಂಡಿಯಾ ಪರ್ಮಿಟ್, ಕಾಂಟ್ರಾಕ್ಟ್ ಬಸ್ ಗಳು ನಾಳೆ ಸಾರ್ವಜನಿಕರ ಸೇವೆಗೆ ರಸ್ತೆಗೆ ಇಳಿಯಲಿದೆ ಎಂದು ತಿಳಿಸಿದರು.

ತಮಿಳುನಾಡಿನಲ್ಲಿರುವ 60ಶೇ. ಸರಕಾರಿ ಬಸ್, 40 ಶೇ ಖಾಸಗಿ ಬಸ್ ಹಾಗೂ ಬದಲಿ ಸರ್ವೀಸ್ ಮಾದರಿಯ ಸಾರಿಗೆ ವ್ಯವಸ್ಥೆನ್ನು ರಾಜ್ಯದಲ್ಲೂ ಜಾರಿಗೆ ತರಬೇಕು ಎಂಬುದು ನಮ್ಮ ಆಗ್ರಹಿಸಿದ ಅವರು, ಖಾಸಗಿ ಬಸ್‍ಗಳಿಗೆ ಪರ್ಮಿಟ್ ನೀಡಬೇಕು ಅದಕ್ಕೆ ಬೇಕಾದ ಕಾನೂನು ತಿದ್ದುಪಡಿಯಾಗಲಿ. ಯಾವುದೇ ಸರಕಾರ ಕೂಡಾ ಬೆದರಿಕೆ ಹಾಕುವ ಬದಲು ಸರಕಾರ ಮತ್ತು ಖಾಸಗಿಯವರಿಗೆ ಪರ್ಮಿಟ್ ನೀಡಿದರೆ ಉತ್ತಮವಾಗಿದೆ. ಸರಕಾರ ಖಾಸಗಿಯವರಿಗೆ ಒಂದಿಷ್ಟು ಪರವಾನಿಗೆ ನೀಡಿದರೆ ಈ ಅನುದಾನ ನೀಡುವುದು ಕಡಿಮೆಯಾಗುತ್ತದೆ. ಇದರೊಂದಿಗೆ ಸರಕಾರಕ್ಕೆ ಅನುದಾನದ ಹೊರೆ ಕಡಿಮೆಯಾಗುತ್ತದೆ, ರಾಜ್ಯ ಸರಕಾರ ಖಾಸಗಿಯವರಿಗೆ ಪರವಾನಿಗೆಯನ್ನು ನೀಡಬಹುದು. ಈ ಕುರಿತಾಗಿ ಮೊದಲು ಇದ್ದ ನಿರ್ಬಂದವನ್ನು ತೆಗೆದು ಹಾಕಲಾಗಿದ್ದು. ಖಾಸಗಿಯವರಿಗೆ ಪರ್ಮಿಟ್ ನೀಡುವ ಅಧಿಕಾರ ರಾಜ್ಯ ಸರಕಾರದ ಕೈಯಲ್ಲಿದೆ ಎಂದು ತಿಳಿಸಿದರು.

ಖಾಸಗಿಯವರು ಕಳೆದ 100 ವರ್ಷಗಳಿಂದ ಯಾವುದೇ ಅನುದಾನ ಇಲ್ಲದೆ ಬಸ್ ಓಡಿಸುತ್ತಿದ್ದೇವೆ ಎಂದ ಅವರು, ಖಾಸಗಿ ಸಾರಿಗೆ ನೌಕರರ ಬೇಡಿಗಳಾದ 3 ತಿಂಗಳಿಗೊಮ್ಮೆ 6 ತಿಂಗಳಿಗೊಮ್ಮೆ ಹಾಗೂ ವರ್ಷಕ್ಕೊಮ್ಮೆ ನೀಡುವ ಮುಂಗಡ ತೆರಿಗೆಯನ್ನು ತಿಂಗಳಿಗೊಮ್ಮೆ ನೀಡುವಂತೆ ಅವಕಾಶ ಮಾಡಿಕೊಡಬೇಕು. ಕೆಎಸ್ ಆರ್ ಟಿಸಿ ಬಸ್ ಮುಷ್ಕರ ಹಿನ್ನೆಲೆ ಸ್ವಾದೀನ ಇದ್ದ ಬಸ್‍ಗಳಿಗೆ ಟ್ಯಾಕ್ಸ್ ಇಲ್ಲದೆ ಓಡಿಸಲು ಅನುಮತಿ ನೀಡಲಾಗಿತ್ತು. ಅದರಂತೆ ಉಳಿದ ಖಾಸಗಿ ಬಸ್ ಗಳಿಗೂ 2 ರಿಂದ 3 ತಿಂಗಳ ವಿನಾಯಿತಿ ನಿಡಬೇಕು ಹಾಗೂ ಸಾರಿಗೆ ಬಸ್ ಗಳಲ್ಲಿ ನೀಡುವ ಅನುದಾನದಂತೆ ಖಾಸಗಿಯವರಿಗೆ ಅನುದಾನ ನೀಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಸಂದೀಪ್ ಕೆ., ಖಜಾಂಚಿ ಚಂದನ್ ವಳಕಾಡು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

error: Content is protected !!