ದ.ಕ. ಜಿಲ್ಲೆಯ 23 ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆಗೆ ಅರ್ಜಿ ಆಹ್ವಾನ
ಮಂಗಳೂರು, ಎ.06:- ದ.ಕ. ಜಿಲ್ಲೆಯ ಪ್ರವರ್ಗ ‘ಸಿ’ ಗೆ ಸೇರಿದ 2 ಸಂಸ್ಥೆಗಳಿಗೆ ಮತ್ತು 11 ಸಂಸ್ಥೆಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸಲು, ಅವಶ್ಯವಿರುವ 9 ಅರ್ಜಿಗಳು ಬಾರದ ಹಿನ್ನೆಲೆಯಲ್ಲಿ ಹಾಗೂ ಈಗಾಗಲೇ ವ್ಯವಸ್ಥಾಪನಾ ಸಮಿತಿ ರಚಿಸಿ ಆದೇಶ ಹೊರಡಿಸಲಾದ ಒಟ್ಟು 10 ಸಂಸ್ಥೆಗಳಲ್ಲಿ ಕೆಲವು ಪ್ರವರ್ಗಗಳಲ್ಲಿ ರಿಕ್ತಸ್ಥಾನ ಉಳಿದಿದ್ದು, ವ್ಯವಸ್ಥಾಪನ ಸಮಿತಿಯಲ್ಲಿ ಸದಸ್ಯರಾಗಲು ಬಯಸುವ ಆಸಕ್ತ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಿ ಪ್ರವರ್ಗದ ದೇವಸ್ಥಾನಗಳು: ಮಂಗಳೂರು ತಾಲೂಕಿನ ,ಕೆಂಜಾರು ಶ್ರೀ ಮೊಗರಂದಾಯ ಮಹಾದೇವ ದೇವಸ್ಥಾನ. ಬಂಟ್ವಾಳ ತಾಲೂಕಿನ: ಪಜೀರುಗ್ರಾಮ ಶ್ರೀ ಮುಂಡಿತ್ತಾಯ ದೈವಸ್ಥಾನ, ನಾವೂರು ಅಗ್ರಹಾರ ಶ್ರೀ ಗೋಪಾಲ ಕೃಷ್ಣ ದೇವಸ್ಥಾನ, ಪೆರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ. ಬೆಳ್ತಂಗಡಿ ತಾಲೂಕಿನ: ಮಲೆಬೆಟ್ಟು ಕೊಯ್ಯತ್ತಾರು ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಪುತ್ತೂರು ತಾಲೂಕಿನ: ಸವಣೂರು ಶ್ರೀ ಮೊಗರು ಕುಂಡಡ್ಕ ವಿಷ್ಣುಮೂರ್ತಿ ದೇವಸ್ಥಾನ, ಪಡುಮಲೆ ಬಡಗನೂರು ಶ್ರೀ ಶಾಸ್ತಾವು ದೇವಸ್ಥಾನ. ಸುಳ್ಯ ತಾಲೂಕಿನ: ಎಡಮಂಗಲ ಶ್ರೀ ನೂಜಿಲ ರಾಮಚಂದ್ರ ದೇವಸ್ಥಾನ, ಬಳ್ಪ ಯಜ್ಞಮೂರ್ತಿ ದೇವಸ್ಥಾನ, ಬಳ್ಪ ಸೋಲಾಡಿ ವಿಷ್ಣುಮೂರ್ತಿ ದೇವಸ್ಥಾನ, ಕೇನ್ಯ ಶ್ರೀ ಬಟ್ರಪಾಡಿ ದೇವಸ್ಥಾನ, ಬಾಳುಗೋಡು ಶ್ರೀ ಕಾಡುಮುಂಡೂರು ಉರಿಯಪ್ಪ ದೇವರು ದೇವಸ್ಥಾನ.
ರಿಕ್ರಸ್ಥಾನದ ಪವರ್ಗ ದೇವಸ್ಥಾನಗಳು: ಮಂಗಳೂರು ತಾಲೂಕಿನ ಕೊಂಪದವು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಉಳಾಯಿಬೆಟ್ಟು ಗ್ರಾಮ ಶ್ರೀ ವಿಶ್ವನಾಥೇಶ್ವರ ದೇವಸ್ಥಾನ, ದೇಲಂತಬೆಟ್ಟು ಗ್ರಾಮ ಶ್ರೀ ಕಯ್ಯಾರು ಬ್ರಹ್ಮ ದೇವಸ್ಥಾನದಲ್ಲಿ ರಿಕ್ತಸ್ಥಾನದ ಪ್ರವರ್ಗ ಪ.ಜಾ/ಪ.ಪಂ- 02, ಮಹಿಳೆ-01 ಹಾಗೂ ಸಾಮಾನ್ಯ-01 ಸದಸ್ಯ ಸ್ಥಾನಕ್ಕೆ, ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮ ಶ್ರೀ ವಿನಾಯಕ ದೇವಸ್ಥಾನ, ನರಿಕೊಂಬು ಗ್ರಾಮ ಶ್ರೀ ಭಯಂಕೇಶ್ವರ ದೇವಸ್ಥಾನದ ರಿಕ್ತಸ್ಥಾನದ ಪ್ರವರ್ಗ ಪ.ಜಾ/ಪ.ಪಂ- 01, ಮಹಿಳೆ-01, ಸದಸ್ಯ ಸ್ಥಾನಕ್ಕೆ, ಬೆಳ್ತಂಗಡಿ ತಾಲೂಕಿನ ಮುಂಡೂರು ಶ್ರೀ ದುರ್ಗಾದೇವಿ ದೇವಸ್ಥಾನ ರಿಕ್ತಸ್ಥಾನದ ಪ್ರವರ್ಗ ಮಹಿಳೆ- 01 ಸದಸ್ಯ ಸ್ಥಾನಕ್ಕೆ, ಪುತ್ತೂರು ತಾಲೂಕಿನ ಕಡಬ ಶ್ರೀ ದುರ್ಗಾಂಬಾ ದೇವಸ್ಥಾನ, ಕುದ್ಮಾರು ಶ್ರೀ ಬರೆಪ್ಪಾಡಿ ಪಂಚಲಿಂಗೇಶ್ವರ ದೇವಸ್ಥಾನ, ಕುರಿಯ ಶ್ರೀ ಅಂಗಾಜ ವಿಷ್ಣುಮೂರ್ತಿ ದೇವಸ್ಥಾನದ ರಿಕ್ತಸ್ಥಾನದ ಪ್ರವರ್ಗ ಸಾಮಾನ್ಯ- 03, ಹಾಗೂ ಮಹಿಳೆ-01 ಸದಸ್ಯ ಸ್ಥಾನಕ್ಕೆ, ಸುಳ್ಯ ತಾಲೂಕಿನ ಶ್ರೀ ರಾಜನ್ದೈವ ಪುರುಷಭೂತ ದೈವಸ್ಥಾನದಲ್ಲಿ ರಿಕ್ತಸ್ಥಾನದ ಪ್ರವರ್ಗ ಪ.ಜಾ/ಪ.ಪಂ- 01 ಸದಸ್ಯ ಸ್ಥಾನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಧಾರ್ಮಿಕ ಪರಿಷತ್, ಮಂಗಳೂರು ಹಾಗೂ ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಪದನಿಮಿತ್ತ ಕಾರ್ಯದರ್ಶಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.