ಉಡುಪಿ: ಮುಜರಾಯಿ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆಗೆ ಅರ್ಜಿ ಆಹ್ವಾನ
ಉಡುಪಿ ಏ.6: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ ಅಧಿನಿಯಮ ದನ್ವಯ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್‌ನ ಸಭೆಯ ನಿರ್ಣಯದಂತೆ ಜಿಲ್ಲೆಯಲ್ಲಿರುವ ಬಿ ಪ್ರವರ್ಗ 4 ಮತ್ತು ಸಿ ಪ್ರವರ್ಗದ 76 ಅಧಿಸೂಚಿತ ಸಂಸ್ಥೆಗಳು, ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿಯನ್ನು ಮೂರು ವರ್ಷಗಳ ಅವಧಿಗೆ ರಚಿಸಲು
ಭಕ್ತಾಧಿಗಳು, ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಿ ಪ್ರವರ್ಗದ ದೇವಸ್ಥಾನಗಳು:- ಉಡುಪಿ ತಾಲೂಕಿನ ಉದ್ಯಾವರದ ಶ್ರೀ ಬ್ರಹ್ಮೇಶ್ವರ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ಸಿದ್ಧಿ
ವಿನಾಯಕ ದೇವಸ್ಥಾನ, ಪಿತ್ರೋಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಹಾಗೂ ಶ್ರೀ ಶಂಭುಕಲ್ಲು ವೀರಭದ್ರ ದೇವಸ್ಥಾನ, ಹೆರ್ಗದ
ಶ್ರೀ ಫರೀಕ ಮಹಾಲಿಂಗೇಶ್ವರ ದೇವಸ್ಥಾನ, ನೈಯಂಪಳ್ಳಿ ಪುತ್ತೂರಿನ ಶ್ರೀ ಮಡಿಮಲ್ಲಿಕಾರ್ಜುನ ದೇವಸ್ಥಾನ, ಇಂದ್ರಾಳಿಯ ಶ್ರೀ
ಇಂದ್ರಾಣಿ ಪಂಚದುರ್ಗಾಪರಮೇಶ್ವರಿ ದೇವಸ್ಥಾನ, ಕೊರಂಗ್ರಪಾಡಿಯ ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಶ್ರೀ
ವಿಷ್ಣುಮೂರ್ತಿ ದೇವಸ್ಥಾನ, ತೆಂಕನಿಡಿಯೂರಿನ ಬೆಳ್ಕಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಹೆರ್ಗದ ಶ್ರೀ ಮಾಣಿಕೋಡು
ವಿಷ್ಣುಮೂರ್ತಿ, ಶ್ರೀ ಅಗ್ರಹಾರ ಹನುಮಂತ ದೇವಸ್ಥಾನ ಹಾಗೂ ಶ್ರೀ ಫರೀಕ ಮಹಾಲಿಂಗ ದೇವಸ್ಥಾನ, ಬೆಳ್ಳರ್ಪಾಡಿಯ ಶ್ರೀ
ಮಹಾವಿಷ್ಣುಮೂರ್ತಿ ದೇವಸ್ಥಾನ.
ಕಾಪು ತಾಲೂಕಿನ: ಮಜೂರಿನ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಹಾಗೂ ಉಳಿಯೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ,
ಕಳತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪಾದೆಬೆಟ್ಟುವಿನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಸಾಂತೂರಿನ ಶ್ರೀ ಸುಬ್ರಹ್ಮಣ್ಯ
ದೇವಸ್ಥಾನ, ಮಟ್ಟುವಿನ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಹಾಗೂ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಚೊಕ್ಕಾಡಿಯ ಶ್ರೀ
ಮಹಾಲಿಂಗೇಶ್ವರ ದೇವಸ್ಥಾನ, ಮೂಡುಬೆಳ್ಳೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪಿಲಾರು ಗ್ರಾಮದ ಶ್ರೀ ಮಹಾಲಿಂಗೇಶ್ವರ
ದೇವಸ್ಥಾನ.
ಬ್ರಹ್ಮಾವರ ತಾಲೂಕಿನ: ಮಣೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕುದಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಹನೆಹಳ್ಳಿ
ಗ್ರಾಮದ ಶ್ರೀ ಸರಸ್ವತಿ ನಾರಾಯಣ ದೇವಸ್ಥಾನ, ಶ್ರೀ ಮೂಡಕೇರಿ ಸೋಮೇಶ್ವರ ದೇವಸ್ಥಾನ ಹಾಗೂ ಕಂಬದ ಶ್ರೀ ವಿನಾಯಕ
ದೇವಸ್ಥಾನ, ಹೊಸಾಳ ಗ್ರಾಮದ ಮಾಣಿಗರ ಕೇರಿಯ ಸೋಮನಾಥೇಶ್ವರ ದೇವಸ್ಥಾನ, ಬಾರ್ಕೂರು ಗ್ರಾಮದ ಹೊಸಾಳ
ಬಪ್ಪಲಾಪುರ ಶ್ರೀ ವಿನಾಯಕ ದೇವಸ್ಥಾನ, ಚಾಂತಾರುವಿನ ಶ್ರೀ ಗಂಗಾಧರ ದೇವಸ್ಥಾನ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ,
ಕಾಡೂರು ಗ್ರಾಮದ ತಂತ್ರಾಡಿಯ ಶ್ರೀ ಕಲ್ಲುಗುಂಡಿ ಮಹಾಗಣಪತಿ ದೇವಸ್ಥಾನ, ಹೆರಂಜಾಲುವಿನ ಶ್ರೀ ಮಹಾಲಿಂಗೇಶ್ವರ
ದೇವಸ್ಥಾನ, ನಾಲ್ಕೂರಿನ ಮರಾಳಿ ಶ್ರೀ ವಿನಾಯಕ ದೇವಸ್ಥಾನ, ಮಾಣಿಗರಕೇರಿಯ ಶ್ರೀ ಸೋಮನಾಥ ದೇವಸ್ಥಾನ, ಗುಂಡ್ಮಿಯ ಶ್ರೀ
ಮಾಣಿ ಚೆನ್ನಕೇಶವ ದೇವಸ್ಥಾನ ಹಾಗೂ ನೂಜಿಕೆರೆ ಶ್ರೀ ವಿನಾಯಕ ದೇವಸ್ಥಾನ, ಕಚ್ಚೂರಿನ ಶ್ರೀ ಬನ್ನಿ ಮಹಾಕಾಳಿ ದೇವಸ್ಥಾನ,
ಮೂಡುಹಡು ಎಡಬೆಟ್ಟುವಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಹಲುವಳ್ಳಿಯ ಶ್ರೀ ಗೋಪಾಲಕೃಷ್ಣ ದೇವಸ್ಥಾನ.
ಕುಂದಾಪುರ ತಾಲೂಕಿನ ಹರ್ದಳ್ಳಿ ಮಂಡಳ್ಳಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಗುಜ್ಜಾಡಿಯ ಶ್ರೀ ಗುಹೇಶ್ವರ ದೇವಸ್ಥಾನ,
ಹಕ್ಲಾಡಿಯ ಮಾಣಿಕೊಳಲು ಶ್ರೀ ಚೆನ್ನಕೇಶವ ದೇವಸ್ಥಾನ, ಹಟ್ಟಿಯಂಗಡಿಯ ಶ್ರೀ ಲೋಕನಾಥೇಶ್ವರ ದೇವಸ್ಥಾನ,
ಹಟ್ಟಿಕುದ್ರುವಿನ ಶ್ರೀ ವಿನಾಯಕ ದೇವಸ್ಥಾನ, ಮೊಳ್ಳಹಳ್ಳಿಯ ಶ್ರೀ ಉಮಾಮಹೇಶ್ವರ ದೇವಸ್ಥಾನ, ಬಡಾಕೋಡಿಯ ಶ್ರೀ ಅರಮ
ಚನ್ನಕೇಶವ ದೇವಸ್ಥಾನ, ಉಪ್ಪಿನಕುದ್ರುವಿನ ಶ್ರೀ ವಿನಾಯಕ ದೇವಸ್ಥಾನ, ಹೆಂಗವಳ್ಳಿಯ ತೊಂಭತ್ತು ಶ್ರೀ ದುರ್ಗಾಪರಮೇಶ್ವರಿ
ದೇವಸ್ಥಾನ, ಸೇನಾಪುರದ ಬೆಳವಿನಮಕ್ಕಿಯ ಶ್ರೀ ಮಹಾಗಣಪತಿ ದೇವಸ್ಥಾನ, ಬೈಲೂರಿನ ಶ್ರೀ ಮಹಿಷಮರ್ಧಿನಿ ದೇವಸ್ಥಾನ,
ಶಂಕರನಾರಾಯಣದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಾಳಾವರದ ಶ್ರೀ ವನದುರ್ಗಾ ದೇವಿ ದೇವಸ್ಥಾನ, ಕೆದೂರುವಿನ
ಬೆಳಗೋಡು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕೋಟೇಶ್ವರದ ಶ್ರೀ ಮಹಾದೇವಿ ಮಾರಿಯಮ್ಮ ದೇವಸ್ಥಾನ, ಆರ್ಡಿ ಕೆರ್ಜಾಡಿಯ
ಶ್ರೀ ದುರ್ಗಾಪರಮೇಶ್ವರಿ (ದುರ್ಗಾದೇವಿ) ದೇವಸ್ಥಾನ, ಕುಂದಬಾರoದಾಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ,
ಕುಂದಾಪುರದ ಚಿಕ್ಕಾನ್‌ಸಾಲ್ ಮೈಲಾರೇಶ್ವರ ದೇವಸ್ಥಾನ, ಕುಂದಾಪುರದ ಶ್ರೀ ಕೂಡಿಗೆ ಚಿತ್ತಾರಿ ಬ್ರಹ್ಮಲಿಂಗ ದೇವಸ್ಥಾನ,
ಮಚ್ಚಟ್ಟುವಿನ ಶ್ರೀ ವಿನಾಯಕ ದೇವಸ್ಥಾನ.
ಬೈಂದೂರು ತಾಲೂಕಿನ: ನಾವುಂದದ ಅರೆಹೊಳೆ ಶ್ರೀ ವಿನಾಯಕ ದೇವಸ್ಥಾನ, ಹೇರೂರಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ,
ಹೆರಂಜಾಲುವಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ನಾಡದ ಶ್ರೀ ಚಿತ್ತಾರಿ ಬ್ರಹ್ಮಲಿಂಗ ದೇವಸ್ಥಾನ, ಬೈಂದೂರಿನ ಬಡಾಕೆರೆ ಶ್ರೀ
ಲಕ್ಷ್ಮಿ ಜನಾರ್ಧನ ದೇವಸ್ಥಾನ, ಅರೆಕಲ್ಲುವಿನ ಬಿಜೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ.
ಕಾರ್ಕಳ ತಾಲೂಕಿನ ಮರ್ಣೆಯ ಅಜೆಕಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಚಾರದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ,
ಬೆಳಂಜೆಯ ಶ್ರೀ ಮಹಿಷಮರ್ಧಿನಿ ದೇವಸ್ಥಾನ, ಬೈಲೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬೋಳದ ಶ್ರೀ ಮೃತ್ಯುಂಜಯ ರುದ್ರ
ಸೋಮನಾಥ ದೇವಸ್ಥಾನ, ಯರ್ಲಪಾಡಿಯ ಶ್ರೀ ವೆಂಕಟರಮಣ ದೇವಸ್ಥಾನ.
ಹೆಬ್ರಿ ತಾಲೂಕಿನ ಕೆರೆಬೆಟ್ಟುವಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶಿವಪುರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ,
ಕಬ್ಬಿನಾಲೆಯ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನ.
ಬಿ ಪ್ರವರ್ಗದ ದೇವಸ್ಥಾನಗಳು: ಉಡುಪಿ ತಾಲೂಕಿನ ಬನ್ನಂಜೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಉಚ್ಚಿಲದ ಶ್ರೀ
ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಕೊಡವೂರಿನ ಶ್ರೀ ಶಂಕರನಾರಾಯಣ ದೇವಸ್ಥಾನ, ಕಾರ್ಕಳ ತಾಲೂಕಿನ ಪೆರ್ವಾಜೆಯ ಶ್ರೀ
ಮಹಾಲಿಂಗೇಶ್ವರ ದೇವಸ್ಥಾನ.
ಕನಿಷ್ಟ 25 ವರ್ಷ ವಯಸ್ಸಿನ ಆಸಕ್ತ ಭಕ್ತಾದಿಗಳು ಯಾವುದೇ ಒಂದು ಅಧಿಸೂಚಿತ ಸಂಸ್ಥೆಯ / ದೇವಾಲಯದ ವ್ಯವಸ್ಥಾಪನಾ
ಸಮಿತಿಗೆ ಮಾತ್ರ ಸದಸ್ಯತ್ವ ಕೋರಿ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಮೇ 10 ರ ಒಳಗೆ ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಜಿಲ್ಲಾ ಕಚೇರಿಗಳ ಸಂಕೀರ್ಣ, ರಜತಾದ್ರಿ, ಮಣಿಪಾಲ ಇವರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.