ಮೆಕ್ಕಾ, ಮದಿನಾ ಯಾತ್ರೆಗೆ ಕೊರೊನಾ ಲಸಿಕೆ ಪಡೆದ ಹಾಗೂ ಪ್ರತಿಕಾಯ ಹೊಂದಿರುವವರಿಗೆ ಮಾತ್ರ ಅವಕಾಶ: ಸೌದಿ ಅರೇಬಿಯಾ ಸರ್ಕಾರ
ರಿಯಾದ್: ರಂಜಾನ್ ತಿಂಗಳಿನಲ್ಲಿ ಆರಂಭವಾಗುವ ಮೆಕ್ಕಾ, ಮದಿನಾ ಯಾತ್ರೆಗೆ ಕೊರೊನಾ ಲಸಿಕೆ ಪಡೆದವರಿಗೆ ಹಾಗೂ ಪ್ರತಿಕಾಯಗಳನ್ನು ಹೊಂದಿರುವವರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಸೌದಿ ಅರೇಬಿಯಾ ಸರ್ಕಾರ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ (ಯಾತ್ರೆ) ಸಚಿವಾಲಯ, ಕೊರೊನಾ ಲಸಿಕೆಯ ಎರಡು ಡೋಸ್‍ಗಳನ್ನು ಈಗಾಗಲೇ ಪಡೆದಿರುವವರು, ಮೊದಲ ಡೋಸ್ ಪಡೆದು ಕನಿಷ್ಠ 14 ದಿನ ಕಳೆದಿರುವವರು ಈಗಾಗಲೇ ಕೊರೊನಾ ಸೋಂಕು ದೃಢಪಟ್ಟು ಗುಣಮುಖರಾಗಿರುವವರನ್ನು ಪ್ರತಿಕಾಯಗಳನ್ನು ಹೊಂದಿದವರು ಎಂದು ಪರಿಗಣನೆ ಮಾಡಲಾಗುವುದು.
ಈ ನಿಯಮ ರಂಜಾನ್ ತಿಂಗಳ ಆರಂಭದಿಂದ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಇವರಿಗೆ ಈ ಪವಿತ್ರ ರಂಜಾನ್ ತಿಂಗಳಿನಲ್ಲಿ ಆರಂಭವಾಗುವ ಮೆಕ್ಕಾ, ಮದಿನಾ ಯಾತ್ರೆಗೆ ಕೊರೊನಾ ಲಸಿಕೆ ಪಡೆದವರಿಗೆ ಹಾಗೂ ಪ್ರತಿಕಾಯಗಳನ್ನು ಹೊಂದಿರುವವರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ತಿಳಿಸಿದೆ.
ಆದರೆ, ಈ ನಿಯಮವು ಎಲ್ಲಿಯವರೆಗೆ ಜಾರಿಯಲ್ಲಿ ಇರಲಿದೆ ಹಾಗೂ ವರ್ಷದ ಕೊನೆಯ ಹಜ್ ಯಾತ್ರೆಗೂ ಇದು ಅನ್ವಯವಾಗಲಿದೆಯೇ ಎಂಬುದನ್ನು ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ (ಯಾತ್ರೆ) ಸಚಿವಾಲಯ ಖಚಿತಪಡಿಸಿಲ್ಲ ಎಂದು ವರದಿಯಾಗಿದೆ.