ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಹೊಸ್ಕರೆ ಶಿವ ಸ್ವಾಮಿ ನಿಧನ
ಉಡುಪಿ: ಎಂ ಜಿ .ಎಂ ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥರು ಸುದೀರ್ಘ ಕಾಲ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಡಾ.ಶಿವ ಸ್ವಾಮಿ( 68) ಸ್ವಯಂ ನಿವೃತ್ತಿ ಪಡೆದು ಕೊಂಡು ಬೆಂಗಳೂರಿನಲ್ಲಿ ನೆಲೆಸಿದ್ದರು.ಕಳೆದ ರಾತ್ರಿ 8.30 ಕ್ಕೆ ತೀವ್ರ ಹೃದಯ ಘಾತದಿಂದ ಬೆಂಗಳೂರಿನ ಸ್ವಗೃಹದಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಲೇೂಕಕ್ಕೆ ಅನುಪಮವಾದ ಕೊಡುಗೆ ನೀಡಿರುವ ಡಾ.ಹೊಸ್ಕರೆಯವರು ಕಡೆಂಗೇೂಡ್ಲುಕವಿ ಸಾಹಿತ್ಯ ಪ್ರಶಸ್ತಿಗೂ ಭಾಜನರಾಗಿದ್ದರು. ಎನ್.ಆರ್.ಪುರ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಕೀತಿ೯ ಅವರಿಗಿದೆ.ನಾಟಕ ವಿಮರ್ಶಕರು ಆಗಿರುವ ಇವರ ವಿಮರ್ಶಾತ್ಮಕ ಲೇಖನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ.
ಉತ್ತಮ ವಾಗ್ಮಿಗಳು ಆಗಿದ್ದ ಶಿವ ಸ್ವಾಮಿಯವರು: ಭಾಷಾಬೇೂಧನಾ ವಿಧಾನದ ಕುರಿತಾಗಿ ಸಂಶೇೂಧನಾ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಗಳಿಸಿ ಕೊಂಡ ಕೀರ್ತಿ ಅವರಿಗಿದೆ.ಎಂ.ಜಿ.ಎಂ ಕಾಲೇಜಿನಲ್ಲಿ ಸಾಹಿತ್ಯ ಕಟ್ಟಿ ಬೆಳೆಸಿದ ಹೊಸ್ಕರೇ ಅವರು ಬಹು ಆಕಷಿ೯ತ ಉಚ್ಚಾರಣೆ ಮತ್ತು ಮಾತುಗಾರಿಕೆ ಯಿಂದ ವಿದ್ಯಾರ್ಥಿಗಳ ಗಮನ ಆಕಷಿ೯ಸುವ ವಿಶೇಷ ಪ್ರತಿಭಾವಂತ ಅಧ್ಯಾಪಕರು ಎಂಬ ಹೆಗ್ಗಳಿಕೆ ಅವರಿಗಿತ್ತು .ಅವರ ಶ್ರೀಮತಿ ನಾಗಮಣಿ ಹೊಸ್ಕರೆ ಅವರು ಕೂಡ ಸಾಹಿತ್ಯ ರಚನೆಯಲ್ಲಿ ತೊಡಗಿಸಿ ಕೊಂಡಿದ್ದರು.ಇಬ್ಬರು ಪುತ್ರರು ಓವ೯ ಪುತ್ರಿಯನ್ನು ಅಗಲಿದ್ದಾರೆ.