ಉಳ್ಳಾಲ: ಪಬ್‌ಜಿ ಆಟದ ಹುಚ್ಚಿಗೆ 13 ವರ್ಷದ ಬಾಲಕ ಬಲಿ?

ಮಂಗಳೂರು : ನಾಪತ್ತೆಯಾಗಿದ್ದ ಬಾಲಕನ ಶವವು ಏಪ್ರಿಲ್ 4 ರ ಭಾನುವಾರ ಮುಂಜಾನೆ ಉಳ್ಳಾಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕೆ.ಸಿ. ರೋಡ್‌ ಬಳಿ ಪತ್ತೆಯಾಗಿದ್ದು, ಈ 13 ವರ್ಷದ ಬಾಲಕನ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಮೃತನನ್ನು ಆಕೀಫ್ (13) ಎಂದು ಗುರುತಿಸಲಾಗಿದೆ. ಬಾಲಕನ ದೇಹವು ಮನೆಯಿಂದ ಸುಮಾರು 3 ಕಿ.ಮೀ ದೂರದಲ್ಲಿ ಪತ್ತೆಯಾಗಿದ್ದು ತಲೆಗೆ ಕಲ್ಲಿನಿಂದ ಒಡೆದು ಹತ್ಯೆಗೈಯಲಾಗಿದೆ. ಏಪ್ರಿಲ್ 3 ರಂದು ಶನಿವಾರ ಸಂಜೆಯಿಂದ ಹಕೀಬ್ ನಾಪತ್ತೆಯಾಗಿದ್ದ. ಪೋಷಕರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಕೀಬ್‌ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದರು.

ಪಬ್‌ಜಿ ಆಟದ ಬಗ್ಗೆ ಆತ ತನ್ನ ಸ್ನೇಹಿತರೊಂದಿಗೆ ಜಗಳವಾಡಿದ್ದ ಎಂದು ಶಂಕಿಸಲಾಗಿದೆ. ಕಳೆದ ವರ್ಷ ಈ ಆಟವನ್ನು ಕೇಂದ್ರ ಸರ್ಕಾರವು ನಿಷೇಧಿಸಿತ್ತು, ಮೂಲಗಳ ಪ್ರಕಾರ, ಕೆಲವು ಲೋಪದೋಷಗಳಿಂದಾಗಿ ಈಗಲೂ ಕೂಡಾ ಈ ಆಟ ಆಡಬಹುದೆಂದು ತಿಳಿದು ಬಂದಿದೆ. ಸ್ಥಳಕ್ಕೆ ಧಾವಿಸಿದ ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!