ಅಕ್ರಮ ಚಿನ್ನ ಸಾಗಾಟ ಓರ್ವನ ಬಂಧನ, 92 ಲಕ್ಷ ರೂ.ಮೌಲ್ಯದ ಚಿನ್ನ ವಶ

ಮಂಗಳೂರು: ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಂದು ನಡೆದಿದೆ.

ಉಳ್ಳಾಲದ ಮೊಹಮ್ಮದ್ ಆಶಿಫ್ ( 28 ) ಬಂಧಿತ ಆರೋಪಿ. ಈತನಿಂದ ವಿಶೇಷವಾಗಿ ವಿನ್ಯಾಸಗೊಳಿಸಿದ ಜೀನ್ಸ್ ಪ್ಯಾಂಟ್ ,ಒಳ ಉಡುಪು ಹಾಗೂ ನೀ ಪ್ಯಾಡ್ (ಮೊಣಕಾಲಿಗೆ ಧರಿಸುವ ಸುರಕ್ಷಾ ಪ್ಯಾಡ್) ನಲ್ಲಿ ಅಡಗಿಸಿಟ್ಟು ಸಾಗಿಸುತ್ತಿದ್ದ 92,27,590 ಲಕ್ಷ ರೂ ಮೌಲ್ಯದ 1.993 ಕೆ.ಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣೆಯಲ್ಲಿ ಕಸ್ಟಮ್ಸ್ ಡೆಪ್ಯುಟಿ ಕಮಿಷನರ್ ಅವಿನಾಶ್ ಕಿರಣ್ ರೊಂಗಾಲಿ ನೇತೃತ್ವದ ಅಧಿಕಾರಿಗಳಾದ ಶ್ರೀಕಾಂತ್, ಸತೀಶ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!