ಇಂದ್ರಾಳಿ ನದಿಗೆ ಮತ್ತೆ ಒಳಚರಂಡಿ ತ್ಯಾಜ್ಯ- ಸಾಂಕ್ರಮಿಕ ರೋಗ ಹರಡುವ ಭೀತಿ

ಉಡುಪಿ(ಉಡುಪಿ ಟೈಮ್ಸ್ ವರದಿ): ನಗರದ ಇಂದ್ರಾಳಿ ನದಿಯಲ್ಲಿ ತ್ಯಾಜ್ಯ ನೀರು ಮಿಶ್ರಣಗೊಳ್ಳುತ್ತಿರುವುದಿಂದ ಅನೇಕ ಸಮಸ್ಯೆಗಳು ಉಂಟಾಗುತ್ತಿದೆ ಎಂಬ ಆರೋಪಗಳು ಮೊದಲಿನಿಂದಲೂ ಕೇಳಿ ಬರುತ್ತಲೇ ಇದೆ. ಅಲ್ಲದೆ ಈಗಾಗಲೇ ಇಂದ್ರಾಳಿ ನದಿಯ ಉಳಿವಿಗಾಗಿ ಪರಿಸರವಾದಿಗಳು, ಸಂಘ ಸಂಸ್ಥೆಗಳು ಹೋರಾಟ ಮಾಡುತ್ತಲೇ ಇದೆ. ಅಲ್ಲದೆ ನದಿಯಲ್ಲಿ ತ್ಯಾಜ್ಯ ನೀರು ಬಿಡುತ್ತಿರುವುದನ್ನು ತಡೆದು ಜಲ ಸಂಪನ್ಮೂಲವನ್ನು ರಕ್ಷಿಸುವಂತೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ಕೆ. ಬಾಲಗಂಗಾಧರ ರಾವ್, ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಆಗ್ರಹಿಸಿದ್ದಾರೆ.

ಆದರೆ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಇದೀಗ ನಗರದ ಕಲ್ಸಂಕ ಬಳಿ ಹಾದುಹೋಗುವ ಇಂದ್ರಾಳಿ ನದಿಯಲ್ಲಿ ಡ್ರೈನೇಜ್ ನೀರನ್ನು ಹರಿದು ಬೀಡಲಾಗುತ್ತಿರುವ ದೃಶ್ಯ ಮತ್ತೆ ಕಂಡು ಬಂದಿದೆ. ಇದರಿಂದ ಈ ಭಾಗದ ಸ್ಥಳೀಯರು ಹಾಗೂ ಸಾರ್ವಜನಿಕರಲ್ಲಿ ಸಾಂಕ್ರಮಿಕ ರೋಗ ಹರಡುವ ಭೀತಿ ಎದುರಾಗಿದೆ. ಅಲ್ಲದೆ ಈ ಭಾಗದ ಪರಿಸರದಲ್ಲಿ ಗಬ್ಬುವಾಸನೆ ಬೀರುತ್ತಿದ್ದು ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ನಡೆದಾಡುವ ಪರಿಷ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಅನೇಕ ಬಾರಿ ವಿರೋಧಗಳು ವ್ಯಕ್ತವಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಜಲ ಮೂಲವನ್ನು ರಕ್ಷಿಸಿಸುವಲ್ಲಿ ಕಾಳಜಿ ವಹಿಸಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅಲ್ಲದೆ ತಕ್ಷಣ ನಗರಾಡಳಿತವು ಈ ವಿಷಕಾರಿ ತ್ಯಾಜ್ಯನೀರನ್ನು ಬಿಡುವುದನ್ನು ನಿಲ್ಲಿಸಬೇಕು ಎಂಬ ಆಗ್ರಹಗಳು ಕೇಳಿ ಬಂದಿದೆ. 

Leave a Reply

Your email address will not be published. Required fields are marked *

error: Content is protected !!