ಕ್ಷೌರಿಕ ವೃತ್ತಿಯನ್ನುಅವಮಾನಿಸಿದ ಪ್ರಭು ಚೌಹಣ್- ಉಡುಪಿ ಜಿಲ್ಲಾ ಸವಿತ ಸಮಾಜ ಖಂಡನೆ
ಉಡುಪಿ(ಉಡುಪಿ ಟೈಮ್ಸ್ ವರದಿ): ಬಸವ ಕಲ್ಯಾಣ ಉಪ ಚುನಾವಣಾ ಪ್ರಚಾರ ಸಭೆಯಲ್ಲಿ ಕ್ಷೌರಿಕ ವೃತ್ತಿಯನ್ನು ಪಶು ಸಂಗೋಪನಾ ಸಚಿವರಾದ ಪ್ರಭು ಚೌಹಣ್ ಅವಮಾನಿಸಿದ್ದು, ಇದನ್ನು ಉಡುಪಿ ಜಿಲ್ಲಾ ಸವಿತ ಸಮಾಜ ಖಂಡಿಸಿದೆ.
ಘಟನೆಯನ್ನು ಖಂಡಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಉಡುಪಿ ಜಿಲ್ಲಾ ಸವಿತ ಸಮಾಜದ ಅಧ್ಯಕ್ಷ ವಿಶ್ವನಾಥ ಭಂಡಾರಿ ನಿಂಜೂರು ಹಾಗೂ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು ಅವರು ಚುನಾವಣಾ ಪ್ರಚಾರ ಸಭೆಯಲ್ಲಿ ಕ್ಷೌರಿಕರ ವೃತ್ತಿಯನ್ನು ಅವಮಾನಿಸಿದ್ದು, ರಾಜ್ಯದ ಕ್ಷೌರಿಕ ಸ್ವಾಭಿಮಾನಕ್ಕೆ ಧಕ್ಕೆ ತಂದಂತ್ತಾಗಿದೆ.
ಕ್ಷೌರಿಕರು ರಾಜ್ಯದಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ, ಹಿಂದುಳಿದಿರ ಬಹುದು ಆದರೆ ಸ್ವಾಭಿಮಾನದಿಂದ ಪ್ರಾಮಾಣಿಕವಾಗಿ ಬದುಕು ಸಾಗಿಸುವ ನಮ್ಮನ್ನು ಅಪಹಾಸ್ಯ ಮಾಡುವ ಮೊದಲು ಸಚಿವರಾಗಿದ್ದುಕೊಂಡು ಸಾಮಾಜಿಕ ನ್ಯಾಯ ಕೊಡುವ ಜವಾಬ್ದಾರಿ ಅರಿಯದೆ ಅದಕ್ಕೆ ತಿಲಾಂಜಲಿ ಇಟ್ಟಿರುವುದು ತುಂಬಾ ಬೇಸರ ತಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.