ಉಡುಪಿ: ಕಸ್ತುರ್ಬಾ ನಗರದಲ್ಲಿ ಅಪರಿಚಿತ ಶವ ಪತ್ತೆ
ಉಡುಪಿ: ಕುಕ್ಕಿಕಟ್ಟೆ ಬಳಿಯ ಕಸ್ತುರ್ಬಾ ನಗರದ ಗಿಡಗಂಟಿ ಬೆಳೆದಿರುವ ಬಯಲು ಪ್ರದೇಶದಲ್ಲಿ ಸುಮಾರು 65 ವರ್ಷದ ಅಪರಿಚಿತ ವೃದ್ಧರ ಶವ ಪತ್ತೆಯಾಗಿರುವ ಘಟನೆ ನಡೆದಿದೆ. ಮೃತರ ವಾರಸುದಾರರು ನಗರ ಪೊಲೀಸ್ ಠಾಣೆಯ ನಾಗರಿಕ ಸಹಾಯ ಕೆಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಹಲಸಿನ ಮರದ ಬುಡದಲ್ಲಿದ್ದ ಪೊದೆಯೊಳಗೆ ಶವ ಕಂಡುಬಂದಿದೆ. ಪಕ್ಕದಲ್ಲಿ ಕಿತ್ತಿರುವ ಹಲಸಿನ ಕಾಯಿ ಕಂಡುಬಂದಿದ್ದು, ವೃದ್ಧರು ಹಲಸಿನ ಹಣ್ಣು ಕೀಳುವಾಗ ಆಯತಪ್ಪಿ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಮೃತರ ಬಳಿ ದೇಜು ಪೂಜಾರಿ ಹೆಸರಿನ ಚೀಟಿ ಇರುವುದು ಕಂಡುಬಂದಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.