ಇಂದಿನ ನಿಮ್ಮ ರಾಶಿ ಭವಿಷ್ಯ

ಮೇಷ: ಬೇರೆಯವರ ಸಂಸಾರ ಸರಿಮಾಡಲು ಹೋಗಿ ನಿಮ್ಮ ಕುಟುಂಬ ಜೀವನದಲ್ಲಿ ಅಶಾಂತಿಯನ್ನು ತಂದುಕೊಳ್ಳದಿರಿ. ವಿದೇಶದಿಂದ ಮಗ ಹಾಗೂ ಅವರ ಕುಟುಂಬದ ಆಗಮನವಾಗಲಿದೆ. ಸಾಮಾಜಿಕ ಸೇವೆಯಲ್ಲಿಯೇ ಸಂತೃಪ್ತಿ ಕಾಣುವ ನಿಮಗೆ ಅದರಲ್ಲೇ ಕೀರ್ತಿ, ಗೌರವ ಪ್ರತಿಷ್ಠೆ ಹೆಚ್ಚಲಿದೆ. ಸ್ನೇಹಿತರು ಸಕಾಲದಲ್ಲಿ ಬೆಂಬಲ ನೀಡುವರು.

ವೃಷಭ: ನೂತನ ಪರಿಸರದಲ್ಲಿ ಕೆಲಸ ಮಾಡುವ ಸಾಧ್ಯತೆ ಇದ್ದು ಇದು ನಿಮ್ಮ ವೃತ್ತಿಗೆ ಪೂರಕವಾಗಿದೆ ಮತ್ತು ನಿಮ್ಮ ಬುದ್ಧಿಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ.

ಮಿಥುನ: ಸತತ ಪರಿಶ್ರಮ ಹಾಗೂ ಕಾರ್ಯ ಒತ್ತಡದಿಂದ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ. ಈ ಬಗ್ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ನಿಮ್ಮ ನೆಚ್ಚಿನ ಕ್ಷೇತ್ರದಲ್ಲಿ ಆರೋಗ್ಯಕರ ಸ್ಪರ್ಧೆ ಕಂಡುಬರುವುದು. ಆದರೆ ಯಶಸ್ಸು ಮಾತ್ರ ನಿಮ್ಮದೇ ಆಗುವುದು.

ಕಟಕ: ನೀವು ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡಾ ಅದು ಖರ್ಚುವೆಚ್ಚಗಳಿಗೆ ಸರಿ ಹೊಂದುವುದು. ಆದರೆ ಹಣ ಉಳಿತಾಯ ಮಾಡಲು ಆಗುವುದಿಲ್ಲ. ವಹಿಸಿಕೊಂಡ ಜವಾಬ್ದಾರಿ ನೀವು ಅಂದುಕೊಂಡಷ್ಟು ಶುಭವಲ್ಲ. ಬೇರೆಯವರ ಸಲಹೆಗಳನ್ನು ನಮ್ರತೆಯಿಂದ ಸ್ವೀಕರಿಸುವುದನ್ನು ಕಲಿಯಿರಿ.

ಸಿಂಹ: ವಿದ್ಯಾರ್ಥಿಗಳಿಗೆ ಓದು ಬರಹದಲ್ಲಿ ಆಸಕ್ತಿ ಮೂಡುವುದು. ಕುಟುಂಬದ ಸದಸ್ಯರೊಡನೆ ವಿನಾಕಾರಣ ಮನಸ್ತಾಪ ಮಾಡಿಕೊಳ್ಳದಿರಿ. ರಕ್ತಸಂಬಂಧಿ ಸಮಸ್ಯೆಗಳು ಕಾಡುವ ಸಾಧ್ಯತೆ ಇರುವುದು. ಖರ್ಚಿನ ವಿಷಯದಲ್ಲಿ ಕಡಿವಾಣ ಹಾಕುವುದು ಉತ್ತಮ.
 
ಕನ್ಯಾ: ನಿಮ್ಮ ಉತ್ಸಾಹದ ವೇಗಕ್ಕೆ ಎದುರಾಳಿಗಳು ಕೂಡಾ ಬೆಚ್ಚಿ ಬೀಳುವರು. ಕಠಿಣ ಪರಿಶ್ರಮದಿಂದ ಯಶಸ್ಸು ದೊರೆಯುವುದು. ನಿಮ್ಮನ್ನು ನೋಡಿ ಮಾತ್ಸರ್ಯ ಪಡುವ ವ್ಯಕ್ತಿಗಳನ್ನು ಕಂಡು ತಲೆ ಕೆಡಿಸಿಕೊಳ್ಳಬೇಡಿ.

ತುಲಾ: ವ್ಯವಹಾರದಲ್ಲಿ ಸ್ನೇಹಿತರು, ಅನುಭವಿಗಳ ಹಾಗೂ ಹಿರಿಯರ ಸಹಾಯ ದೊರೆಯಲಿದೆ. ಅದು ದುರುಪಯೋಗವಾಗದಂತೆ ಎಚ್ಚರ ವಹಿಸಿರಿ. ಕಾರ್ಯವೈಖರಿಯಲ್ಲಿ ಬದಲಾವಣೆ ಮಾಡಿಕೊಳ್ಳುವಿರಿ.

ವೃಶ್ಚಿಕ: ಬಹಳ ಆಲೋಚಿಸಿ ಕಾರ್ಯ ಪ್ರವೃತ್ತರಾದಲ್ಲಿ ಯಶಸ್ಸು ದೊರೆಯುವುದು. ಆದಾಯ ಮೂಲಗಳ ಹೆಚ್ಚಳದಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಯೋಜನಾಬದ್ಧ ನಿರ್ಧಾರಗಳಿಂದ ಮಾತ್ರ ವ್ಯವಹಾರದಲ್ಲಿ ಚೇತರಿಕೆ ಕಂಡುಬರುವುದು.

ಧನುಸ್ಸು: ಮಕ್ಕಳ ಭವಿಷ್ಯದ ಬಗೆಗೆ ಈಗಲೇ ಒಂದು ನಿರ್ಧಾರಕ್ಕೆ ಬರುವುದು ಉತ್ತಮ. ಗುರು ದೇವತಾನುಗ್ರಹದಿಂದ ಹೆಚ್ಚಿನ ಆತ್ಮಬಲ ಬರಲಿದೆ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದು. ದೇವತಾ ದರ್ಶನದಿಂದ ಮಾನಸಿಕ ನೆಮ್ಮದಿ ಕಂಡುಕೊಳ್ಳುವಿರಿ.
 
ಮಕರ: ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಲು ಪ್ರಯತ್ನಿಸಿ. ಆತ್ಮೀಯರೊಂದಿಗೆ ರಹಸ್ಯ ಸಮಾಲೋಚನೆ ನಡೆಯಲಿದೆ. ಆರ್ಥಿಕವಾಗಿ ಹೆಚ್ಚಳ ಕಂಡು ಬರುವುದು. ಖಾಸಗಿ ಕಂಪನಿ ನೌಕರರಿಗೆ ಹಳೆಯ ಕಂಪನಿಯಿಂದ ಹೆಚ್ಚಿನ ವೇತನದ ಮರು ಅವಕಾಶ ಒದಗಿ ಬರುವ ಸಾಧ್ಯತೆ ಇರುತ್ತದೆ.

ಕುಂಭ: ಮನೆಗೆ ಬಂಧುಮಿತ್ರರ ಆಗಮನದಿಂದ ಸಂತಸ. ಹೆಚ್ಚಿನ ಖರ್ಚಿಗೆ ದಾರಿಯಾಗುವುದು. ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಯೋಗ ಮತ್ತು ಧ್ಯಾನದ ಮೊರೆಹೋಗುವುದು ಅನಿವಾರ್ಯ. ಸ್ನೇಹಿತರಿಂದ ಸಿಕ್ಕ ಉತ್ತಮ ಸಲಹೆ ಮನೆಯಲ್ಲಿ ಶಾಂತಿ ವಾತಾವರಣ ಮೂಡಿಸುವುದು. ಸಂಗಾತಿಯ ಭಾವನೆಗಳಿಗೆ ಬೆಲೆ ಕೊಡಿ.

ಮೀನ: ನಿಮ್ಮ ಬುದ್ಧಿವಂತಿಕೆ ಹಾಗೂ ಚಾಣಾಕ್ಷ ತನದಿಂದಾಗಿ ಶತ್ರುಗಳ ಪಿತೂರಿ ಬಯಲಾಗಲಿದೆ. ಮತ್ತಾರದೋ ತಂಟೆ ಬಗೆಹರಿಸಲು ಹೋಗಿ ನೀವು ಹಣ ಕಳೆದುಕೊಳ್ಳುವಿರಿ. ಬರಲಿರುವ ಸವಾಲುಗಳನ್ನು ಸುಲಭವಾಗಿ ನಿಭಾಯಿಸುವಿರಿ. ಹಣಕಾಸು ವಿವಿಧ ಮೂಲದಿಂದ ಕೈಸೇರಲಿದೆ.

Leave a Reply

Your email address will not be published. Required fields are marked *

error: Content is protected !!