ಯಡಿಯೂರಪ್ಪ ಅವರೇ, ಗೋಮೂತ್ರ ಸಿಂಪಡಿಸಿದರೂ ನಿಮಗಂಟಿದ ಕಳಂಕ ಶುದ್ಧವಾಗುವುದಿಲ್ಲ! ಕಾಂಗ್ರೆಸ್

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕೊರಳಲ್ಲಿರುವ ಆರೋಪಗಳ ಸರಮಾಲೆಯನ್ನು ವಿವರಿಸಿರುವ ಪ್ರತಿಪಕ್ಷ ಕಾಂಗ್ರೆಸ್, ಯಡಿಯೂರಪ್ಪ ಅವರೇ, ಗೋಮೂತ್ರ ಸಿಂಪಡಿಸಿದರೂ ನಿಮಗಂಟಿದ ಕಳಂಕ ಶುದ್ಧವಾಗುವುದಿಲ್ಲ ಎಂದು ಟೀಕಾ ಪ್ರಹಾರ ನಡೆಸಿದೆ.

ದೇವನಹಳ್ಳಿ ಅಕ್ರಮ ಡಿನೋಟಿಫಿಕೇಷನ್ ಹಗರಣ, ದೇವರಬೀಸನಹಳ್ಳಿ ಅಕ್ರಮ ಡಿನೋಟಿಫಿಕೇಷನ್ ಹಗರಣ
ಆಪರೇಷನ್ ಕಮಲದಲ್ಲಿ ಹಣ ಆಮಿಷದ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಆರೋಪಗಳನ್ನು ಮಾಡಿರುವ ಕಾಂಗ್ರೆಸ್, ಕಳಂಕಿತರಾಗಿ ಅಧಿಕಾರ ನಡೆಸಲು ಸ್ವಲ್ಪವೂ ನಾಚಿಕೆ ಎನಿಸುತ್ತಿಲ್ಲವೇ? ಕಿಡಿಕಾರಿದೆ.

ಯಡಿಯೂರಪ್ಪ  ವಿರುದ್ಧ ಈಶ್ವರಪ್ಪ,  ಯತ್ನಾಳ್ vs ವಿಜಯೇಂದ್ರ ಹೀಗೆ ಬಿಜೆಪಿ ಆಂತರಿಕ ಕಿತ್ತಾಟದಲ್ಲಿ ರಾಜ್ಯ ಬಡವಾಗುತ್ತಿದೆ. ಯತ್ನಾಳ್ ಅವರ ಆರೋಪಗಳನ್ನು ಸಚಿವ ಕೆ.ಎಸ್. ಈಶ್ವರಪ್ಪ ಅನುಮೋದಿಸುತ್ತಿದ್ದಾರೆ. ನಿಮಗೆ ಅಧಿಕಾರ ಸಿಕ್ಕಿದ್ದು, ಅಲ್ಪನಿಗೆ ಐಶ್ವರ್ಯ ಸಿಕ್ಕಂತಾಗಿದೆ ಎಂದು ಕಾಂಗ್ರೆಸ್ ಟ್ವಿಟರ್ ಖಾತೆಯಲ್ಲಿ  ಯಡಿಯೂರಪ್ಪ ವಿರುದ್ಧ ತೀವ್ರ ದಾಳಿ ನಡೆಸಲಾಗಿದೆ

Leave a Reply

Your email address will not be published. Required fields are marked *

error: Content is protected !!