ಉಡುಪಿ: ಪವನ್ ಕುಂಚದಲ್ಲಿ ಅರಳಿದ ವಾಲ್ ಪೈಂಟಿಂಗ್ಸ್’ಗೆ ಭಾರೀ ಬೇಡಿಕೆ

ಉಡುಪಿ(ಉಡುಪಿ ಟೈಮ್ಸ್ ವರದಿ): ಚಿತ್ರಕಲೆ ಎನ್ನುವುದು ಅದೊಂದು ಅದ್ಭುತ ಕಲೆ ಅಂತಾನೇ ಹೇಳಬಹುದು. ಕಲಾವಿದನ ಕುಂಚದಲ್ಲಿ ಅರಳುವ ಕಲೆಗೆ ಬೆಲೆ ಕಟ್ಟಲಸಾಧ್ಯ. ಇಂದಿನ ಆಧುನಿಕ ಯುಗದಲ್ಲಿ ಅನೇಕ ಬಗೆಯ ಚಿತ್ರಕಲೆಯ ಮೂಲಕ ಹಲವಾರು ಪ್ರತಿಭೆಗಳು ಅರಳುತ್ತಿದೆ. ಅದರಲ್ಲಿ ವಾಲ್ ಆರ್ಟ್ ಕೂಡಾ ಒಂದು. ವಾಲ್ ಆಟ್ ಕೂಡಾ ಒಂದು ವಿಶೇಷವಾದ ಚಿತ್ರಕಲೆ ಎಂದರೆ ತಪ್ಪಾಗಲಾದರು. ಈ ವಾಲ್ ಆರ್ಟ್ ಮೂಲಕ ಅನೇಕರು ತಮ್ಮಲ್ಲಿರುವ ಕಲೆಯನ್ನು ಹೊರ ಜಗತ್ತಿಗೆ ತೋರ್ಪಡಿಸುತ್ತಿದ್ದಾರೆ.

ಮನೆಯ ಗೋಡೆಗಳಲ್ಲಿ ವರ್ಣ ರಂಜಿತ ಚಿತ್ರಗಳಿದ್ದರೆ ಎಷ್ಟು ಚೆಂದ ಅಲ್ವಾ..?  ಅಂಗಳದಲ್ಲಿ ಮಲಗಿ ಆಕಾಶ ನೋಡುತ್ತಿದ್ದೇವೆ ಎನ್ನುವ ಅನುಭವ ಉಂಟು ಮಾಡುವ ಮಿನುಗುವ ನಕ್ಷತ್ರಗಳನ್ನು ಹೋಲುವ ಛಾವಣಿ ವಿನ್ಯಾಗಳು, ಸಮುದ್ರದ ಆಳದಲ್ಲಿ ಕೂತು ವಿವಿಧ ಬಗೆಯ ಮೀನುಗಳನ್ನು ನೋಡುತ್ತಿರುವಂತೆ ಭಾಸವಾಗುವ ಗೋಡೆ ವಿನ್ಯಾಸ. ಇದರೊಂದಿಗೆ ಬಣ್ಣ ಬಣ್ಣದ ಹೂಗಳಿಂದ ಕೂಡಿದ ಬಳಿ ಅಂಗಳದಾಟಿ ಮನೆಯೊಳಗೆ ಬಂದಂತೆ ಕಾಣುವ ಗೋಡೆಗಳ ಮೇಲಿನ ಚಿತ್ತಾರ. ಈ ವರ್ಣ ರಂಜಿತ ಚಿತ್ತಾರಗಳು ಮನೆಯ ಅಂದವನ್ನು ಹೆಚ್ಚಿಸುವ ಜೊತೆಗೆ ಮನವನ್ನೂ ಮುದಗೊಳಿಸುತ್ತದೆ.

ನೀವು ನೋಡುತ್ತಿರುವ ಈ ಚಿತ್ತಾರಗಳು ಅರಳಿರುವುದು ಉಡುಪಿಯ ಪ್ರತಿಭೆ ಪವನ್ ಅವರ ಕುಂಚದಲ್ಲಿ. ಶಾಲಾದಿನಗಳಿಂದಲೇ ಚಿತ್ರಕಲೆಯಲ್ಲಿ ಹೊಂದಿದ್ದ ಅಪಾರವಾದ ಆಸಕ್ತಿ ಇಂದು ಇವರನ್ನು ಓರ್ವ ವಾಲ್ ಆರ್ಟಿಸ್ಟ್ ಆಗಿ ರೂಪು ಪಡೆಯುವಂತೆ ಮಾಡಿದೆ.

ಪವನ್ ಅವರು ವೃತ್ತಿಯಲ್ಲಿ ಆನಿಮೇಶನ್ ಗ್ರಾಫಿಕ್ ಡಿನೈನರ್, ಉಡುಪಿಯ ಪ್ರಸಿದ್ದ ಸಂಸ್ಥೆಯೊಂದರಲ್ಲಿ ಆನಿಮೇಶನ್ ಗ್ರಾಫಿಕ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ವಾಲ್ ಆರ್ಟ್ ನೆಚ್ಚಿನ ಹವ್ಯಾಸ. ಅಲ್ಲದೆ ಇವರು ಕ್ಯಾನ್‍ವಾಸ್ ಆರ್ಟಿಸ್ಟ್ ಕೂಡಾ ಹೌದು. ಈಗಾಗಲೇ ಇವರ ಕೈಯಲ್ಲಿ ಅನೇಕ ಕ್ಯಾನ್‍ವಾಸ್ ಪೈಂಟಿಂಗ್‍ಗಳು ಮೂಡಿ ಬಂದಿದೆ. ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ಇವರ ವಾಲ್ ಆರ್ಟ್‍ನ ಮೊದಲ ಪ್ರಯೋಗ ನಡೆದದ್ದು ಇವರ ಮನೆಯಲ್ಲಿಯೆ. ಚಿತ್ರ ಕಲೆಗೆ ಸಂಬಂಧಿಸಿ ಕುಂದಾಪುರದ ಕೋಟದಲ್ಲಿ ಪರೀಕ್ಷೆ ಬರೆದಿದ್ದಾರೆ. ಯೂಟ್ಯೂಬ್ ಮೂಲಕ ವಾಲ್ ಆರ್ಟ್ ಕಲಿತು ತಮ್ಮ ಹವ್ಯಾಸಕ್ಕೆ ಬಣ್ಣ ಹಚ್ಚಲಾರಂಭಿಸಿದರು.

3 ವರ್ಷಗಳಿಂದ ವಾಲ್ ಪೇಯಿಂಟಿಂಗ್ ನಲ್ಲಿ ತೊಡಗಿಸಿಕೊಂಡಿರುವ ಪವನ್ ಅವರ ಕೈಚಳಕದಲ್ಲಿ ಇದುವೆಗೆ ಸುಮಾರು 100 ರಿಂದ 150 ವಾಲ್ ಆರ್ಟ್‍ಗಳು ಮೂಡಿ ಬಂದಿದೆ. ಇವರ ವಾಲ್ ಆರ್ಟ್ ಗಳು 6 ರಿಂದ 7 ವರ್ಷ ವರೆಗೆ ಬಾಳಿಕೆ ಬರುತ್ತದೆ.
ತಮ್ಮ ವಾಲ್ ಆರ್ಟ್ ನ ಹವ್ಯಾಸಕ್ಕೆ ಮನೆಯಲ್ಲಿ ಸಂಪೂರ್ಣ ಸಹಕಾರ ನೀಡುತ್ತಾರೆ ಎನ್ನುವ ಪವನ್ ಅವರು, ಆರಂಭದಲ್ಲಿ ತಮ್ಮ ಮನೆಯ ಗೋಡೆ ಮೇಲೆಯೇ ತಮ್ಮ ಕಲೆಯನ್ನು ಮೂಡಿಸಿದ್ದರು. ಇದನ್ನು ಗಮನಿಸಿದ ಇವರ ಸ್ನೇಹಿತರು ಇವರ ಕಲೆ ಇನ್ನಷ್ಟು ಜನರನ್ನು ತಲುಪುವಂತೆ ಮಾಡುವಲ್ಲಿ ಸಹಕಾರಿಯಾಗಿದ್ದಾರೆ ಎಂದು ತಮ್ಮ ಹವ್ಯಾಸಕ್ಕೆ ರೆಕ್ಕೆ ಕಟ್ಟಿದ ಸ್ನೇಹಿತರನ್ನು ನೆನೆದುಕೊಳ್ಳುತ್ತಾರೆ.

ಮನೆಗಳ ಗೋಡೆಗಳಿಗೆ ಚಿತ್ರಗಳನ್ನು ಬಿಡಿಸುವಾಗ ಅವರಿಷ್ಟದ ಚಿತ್ರಗಳನ್ನು ಬಿಡಿಸುವ ಜೊತೆಗೆ ಗ್ರಾಹಕರ ಇಷ್ಟದ ಚಿತ್ರಗಳನ್ನು ಬಿಡಿಸುತ್ತಾರೆ. ತಾವು ಬಿಡಿಸುವ ಚಿತ್ರಗಳು ಆಯಾ ಗೋಡೆಯ ವಿಸ್ತ್ರೀರ್ಣಕ್ಕೆ ಅನುಗುಣವಾಗಿ ರೂಪುಗೊಳ್ಳುತ್ತವೆ. ಯಾವುದೇ ವಾಲ್ ಆರ್ಟ್ ತಯಾರಿಸುವಾಗ ಮೊದಲು ಗೋಡೆ ವಿಸ್ತೀರ್ಣಕ್ಕೆ, ಉದ್ದ, ಅಗಲ ಗಳಿಗೆ ಅನುಗುಣವಾಗಿ ಡಿಸೈನ್ ಗಳನ್ನು ತಯಾರಿ ಮಾಡಿಕೊಳ್ಳಬೇಕು ಹಾಗೂ ಯಾವ ರೀತಿ ಚಿತ್ರ ಬರೆಯಬೇಕು ಹಾಗೂ ಎಷ್ಟು ಸಮಯದಲ್ಲಿ ಮುಗಿಸಬೇಕು ಎಂಬುದನ್ನು ಸರಿಯಾದ ರೀರಿಯಲ್ಲಿ ಪ್ಲಾನ್ ಮಾಡಿ ಕೆಲಸ ಆರಂಭಿಸಿದರೆ ಯಾವುದೇ ಸಮಸ್ಯೆ ಇಲ್ಲದೆ ವಾಲ್ ಆರ್ಟ್‍ನ್ನು ಅಂದುಕೊಂಡಂತೆ ಮಾಡಿ ಮುಗಿಸಬಹುದು ಎನ್ನುತ್ತಾರೆ ವಲ್ ಆರ್ಟಿಸ್ಟ್ ಪವನ್.

ಪವನ್ ಅವರ ಕುಂಚದಲ್ಲಿ ಅರಳುವ ಈ ಅದ್ಬುತ ಚಿತ್ರಗಳು ನಿಮ್ಮ ಮನೆಯ ಗೋಡೆಗಳನ್ನು ಅಂದಗಾಣಿಸಬೇಕಾದರೆ ಅವರನ್ನು ಮೊಬೈಲ್ ನಂ. 8494815228, ಇನ್‍ಸ್ಟಗ್ರಾಂ artist_soul_997 ಮೂಲಕ ಅವರನ್ನು ಸಂಪರ್ಕಿಸಬಹುದು. 

Leave a Reply

Your email address will not be published. Required fields are marked *

error: Content is protected !!