| ಉಡುಪಿ: ಹೆದ್ದಾರಿಗಳ ವಿವಿಧ ಟೋಲ್‍ಗಳಲ್ಲಿ ಶುಲ್ಕ ಪರಿಷ್ಕರಣೆ ಆದೇಶ ಹೊರಡಿಸಲಾಗಿದೆ. ಅದರಂತೆ ಎಪ್ರಿಲ್ 1 ರಿಂದ ಪರಿಷ್ಕøತ ಶುಲ್ಕ ಜಾರಿಗೆ ಬರಲಿವೆ.
ಈ ಪರಿಷ್ಕøತ ಆದೇಶವು, ತಲಪಾಡಿ, ಹೆಜಮಾಡಿ ಹಾಗೂ ಸಾಸ್ತಾನ ಟೋಲ್ ಗೇಟ್‍ಗಳಿಗೆ ಅನ್ವಯವಾಗಲಿದೆ. ಬ್ರಹ್ಮರಕೂಟ್ಲು ಹಾಗೂ ಎನ್‍ಐಟಿಕೆ ಟೋಲ್‍ಗೇಟ್‍ಗಳಿಗೆ ಪರಿಷ್ಕೃತ ದರಗಳನ್ನು ಎಪ್ರಿಲ್ 1ರಂದು ಪ್ರಕಟಿಸಲಾಗುವುದು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಜಮಾಡಿ ಟೋಲ್‍ನಲ್ಲಿ ಲಘು ವಾಹನಗಳಿಗೆ ಇದ್ದ ಏಕ ಮುಖ 35 ರೂ. 40 ರೂ.ಗೆ ಹಾಗೂ ದ್ವಿಮುಖ ದರ 50-60 ರೂ, ಮಾಸಿಕ ಪಾಸ್ ಬೆಲೆ 1,145ರಿಂದ 1,280 ರೂ ಏರಿಕೆಯಾಗಿದೆ.
ಲಘು ವಾಣಿಜ್ಯ ವಾಹನಗಳು, ಸರಕು ವಾಹನಗಳು, ಮಿನಿ ಬಸ್‍ಗಳಿಗೆ ಏಕಮುಖ ದರ 55 ರೂನಿಂದ 60 ರೂ., ದ್ವಿಮುಖ 85 ರೂ. ನಿಂದ 95 ರೂ., ಮಾಸಿಕ ಪಾಸ್ 1,850 ರೂ.ನಿಂದ 2,065 ರೂ ಹಾಗೂ ಟ್ರಕ್, ಬಸ್‍ಗಳಿಗೆ ಏಕಮುಖ 115 ರೂ. ನಿಂದ 130 ರೂ., ದ್ವಿಮುಖ 175 ರೂ. ನಿಂದ 195 ರೂ., ಮಾಸಿಕ ಪಾಸ್ ದರ 3,880 ರೂ. ನಿಂದ 4,325 ರೂ., ಸ್ಥಳೀಯರ ಮಾಸಿಕ ಪಾಸ್ ಬೆಲೆ 255 ರೂ. ನಿಂದ 285 ರೂ ಏರಿಕೆಯಾಗಿದೆ.
ತಲಪಾಡಿಯಲ್ಲಿ ಲಘು ವಾಹನಗಳಿಗಿದ್ದ ಏಕಮುಖ ಸಂಚಾರ 40 ರೂ., ದ್ವಿಮುಖ ಸಂಚಾರ 60 ರೂ. ನಿಂದ 65 ರೂ., ಮಾಸಿಕ ಪಾಸ್ ದರ 1,400 ರೂ., ಲಘು ವಾಣಿಜ್ಯ ವಾಹನ, ಮಿನಿ ಬಸ್ ಗಳಿಗೆ ಏಕಮುಖ ಸಂಚಾರ 65 ರೂ., ದ್ವಿಮುಖ ಸಂಚಾರ 95 ರೂ., ಮಾಸಿಕ ಪಾಸ್ 2,155 ರೂ ಏರಿಕೆಯಾಗಿದೆ.
ಇನ್ನು ಸಾಸ್ತಾನದಲ್ಲಿ ಲಘು ವಾಹನಗಳಿಗೆ ಏಕಮುಖ 45 ರೂ., ದ್ವಿಮುಖ 70 ರೂ., ಮಾಸಿಕ ಪಾಸ್ 1,505 ರೂ. ನಿಂದ 1,555 ರೂ., ಲಘು ವಾಣಿಜ್ಯ, ಮಿನಿ ಬಸ್ ಗಳಿಗೆ ಏಕ ಮುಖ 75 ರೂ., ದ್ವಿಮುಖ 110 ರೂ. ನಿಂದ 115 ರೂ., ಮಾಸಿಕ ಪಾಸ್ ದರ 2,430 ರೂ. ನಿಂದ 2,510 ರೂ. ಹಾಗೂ ಟ್ರಕ್ ಬಸ್ ಗಳಿಗೆ ಏಕ ಮುಖ 155 ರೂ. ನಿಂದ 160 ರೂ., ದ್ವಿಮುಖ ಸಂಚಾರ 230 ರೂ.ನಿಂದ 235 ರೂ., ಮಾಸಿಕ ಪಾಸ್ 5,095 ರೂ.ನಿಂದ 5,260 ರೂ., ಸ್ಥಳೀಯರ ಮಾಸಿಕ ಪಾಸ್ ದರ 275 ರೂ. ನಿಂದ 285 ರೂ. ಗೆ ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
| |