ಬಂಟ್ವಾಳ: ಬಸ್ ಕಂದಕಕ್ಕೆ ಉರುಳಿ ವಿದ್ಯಾರ್ಥಿಗಳು ಸೇರಿ 23 ಜನರಿಗೆ ಗಾಯ
ಬಂಟ್ವಾಳ: ನಿಯಂತ್ರನ ತಪ್ಪಿದ ಬಸ್ ಕಂದಕಕ್ಕೆ ಉರುಳಿ ವಿದ್ಯಾರ್ಥಿಗಳು ಸೇರಿ 23 ಜನರಿಗೆ ಗಾಯಗೊಂಡ ಘಟನೆ ಬಂಟ್ವಾಳದ ಎಸ್ವಿಎಸ್ ಕಾಲೇಜು ಬಳಿ ನಡೆದಿದೆ. 25 ಮಂದಿ ಪ್ರಯಾಣಿಕರಿದ್ದ ಬಸ್ ಪುಂಜಾಲಕಟ್ಟೆ, ಮೂರ್ಜೆ, ವಾಮದಪದವು , ಮಾರ್ಗವಾಗಿ ಬಿ. ಸಿ ರೋಡಿಗೆ ತೆರಳುತ್ತಿತ್ತು. ಕಾಲೇಜು ಸಮೀಪಿಸುತ್ತಿದ್ದಂತೆ ಬಸ್ ಕಂದಕಕ್ಕೆ ಉರುಳಿದೆ. ಘಟನೆಯಲ್ಲಿ ಗಾಯಗೊಂಡ ಪ್ರಯಾಣಿಕರನ್ನು ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಆಸ್ಪತ್ರೆಗೆ ಭೇಟಿ ನೀಡಿದ್ದ ಆರೋಗ್ಯ ಸಚಿವ ಡಾ. ಸುಧಾಕರ್ ಅವರು, ಘಟನೆಯಲ್ಲಿ ಗಾಯಗೊಂಡಿದ್ದ ಪ್ರಯಾಣಿಕರ ಆರೋಗ್ಯ ವಿಚಾರಿಸಿದರು ಅಲ್ಲದೆ ಘಟನೆ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.