ಖಾಸಗಿ ಬಸ್ಸಿನಲ್ಲಿ ಜೋಡಿಯ ಲವ್ವಿ- ಡವ್ವಿ: ಬಜರಂಗ ದಳದ ಕಾರ್ಯಕರ್ತರ ದಾಳಿ

ಸುರತ್ಕಲ್: ಬಸ್‍ನಲ್ಲಿ ಅನ್ಯ ಕೋಮಿನ ಯುವಕನೊಂದಿಗೆ ಪ್ರಯಾಣಿಸುತ್ತಿದ್ದ ಜೋಡಿಯನ್ನು ಬಜರಂಗ ದಳದ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ ಘಟನೆ ಸುರತ್ಕಲ್ ನಲ್ಲಿ ನಡೆದಿದೆ.

ಉಡುಪಿಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತದ್ದ ಖಾಸಗಿ ಬಸ್ಸಿನಲ್ಲಿ ಅನ್ಯ ಕೋಮಿನ ಯುವಕ, ಯುವತಿ ಪ್ರಯಾಣಿಸುತ್ತಿದ್ದರು. ಈ ವೇಳೆ ಸುರತ್ಕಲ್ ಬಳಿ ಬಸ್ಸ್ ತಡೆದ ಬಜರಂಗದಳದ ಕಾರ್ಯಕರ್ತರು. ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೇ ವೇಳೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಜರಂಗದಳ, ಜಿಲ್ಲೆಯಲ್ಲಿ ಲವ್‍ಜಿಹಾದ್ ಪ್ರಕರಣ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣ ಕಂಡು ಬಂದರೆ ಮತ್ತೆ ನೇರ ಕಾರ್ಯಾಚರಣೆ ನಡೆಸುತ್ತೇವೆಂದು ಎಚ್ಚರಿಕೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!