ಶಿರ್ವ: ವಿಷ ಸೇವಿಸಿ ಯುವಕ ಮೃತ್ಯು

ಶಿರ್ವ: ವಿಷ ಸೇವಿಸಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಿಲಾರು ಗ್ರಾಮದ ಪಿಲಾರು ತೋಟ ಹೌಸ್ ಎಂಬಲ್ಲಿ ನಡೆದಿದೆ. ಜೋಯ್ ಡಿ’ಸೋಜ (25) ಆತ್ಮಹತ್ಯೆ ಮಾಡಿಕೊಂಡವರು.

ಇವರ ತಂದೆ ಅಂಗವೈಕಲ್ಯ ಹೊಂದಿದ್ದು ಹಾಗೂ ತಾಯಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಈ ಕಾರಣದಿಂದ ಜೀವನದಲ್ಲಿ ಮನನೊಂದು ಮಾ.29ರ ಬೆಳಿಗ್ಗೆ ಮನೆಯ ಎದುರುಗಡೆ ಇರುವ ಕೊಟ್ಟಿಗೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ReplyReply allForward

Leave a Reply

Your email address will not be published. Required fields are marked *

error: Content is protected !!