ಝೀ ಮೀಡಿಯಾದ 28 ಸಿಬ್ಬಂದಿಗಳಿಗೆ ಕೊರೋನಾ ಸೋಂಕು!
ನೋಯ್ಡಾ: ಝೀ ಮೀಡಿಯಾದ 28 ಉದ್ಯೋಗಿಗಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು ಪರಿಣಾಮ ಝೀ ಮೀಡಿಯಾ ಕಚೇರಿ , ನ್ಯೂಸ್‌ರೂಮ್ ಮತ್ತು ಸ್ಟುಡಿಯೋಗಳನ್ನು ಸೀಲ್ ಮಾಡಲಾಗಿದೆ ಎಂದು ಮೀಡಿಯಾ ಪ್ರಕಟಣೆ ಹೇಳೀದೆ.
“ಜಾಗತಿಕ ಸಾಂಕ್ರಾಮಿಕ ಮಹಾಮಾರಿ ಕೊರೋನಾ ಈಗ ಝೀ ಮೀಡಿಯಾದ ಫಾಲಿಗೆ ಮುಳ್ಳಾಗಿದೆ. ಕಳೆದ ಶುಕ್ರವಾರ, ನಮ್ಮ ಸಹೋದ್ಯೋಗಿಯೊಬ್ಬರು ಕೋವಿಡ್ -19 ಸೋಂಕಿಗೆ ತುತ್ತಾಗಿದ್ದರು. ಜವಾಬ್ದಾರಿಯುತ ಸಂಘಟನೆಯಾಗಿ, ನಾವು ನೇರ ಅಥವಾ ಪರೋಕ್ಷ ಸಂಪರ್ಕದಲ್ಲಿರಬಹುದಾದ ಎಲ್ಲರ ಸಾಮೂಹಿಕ ಪರೀಕ್ಷೆಯನ್ನು ಪ್ರಾರಂಭಿಸಿದ್ದೇವೆ ಎಂಬುದಾಗಿ ಮೀಡಿಯಾ ಸಂಸ್ಥೆಯ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಇಲ್ಲಿಯವರೆಗೆ ನಮ್ಮ ತಂಡದ 28 ಮಂದಿಗೆ ಕೊರೋನಾ ಇರುವುದು ದೃಢವಾಗಿದೆ. ಅದೃಷ್ಟವಶಾತ್, ಅವರಲ್ಲಿ ಹೆಚ್ಚಿನವರಿಗೆ ಯಾವ ರೋಗಲಕ್ಷಣವೂ ಇಲ್ಲ. ಇದು ಆರಂಭಿಕ ರೋಗನಿರ್ಣಯ ಮತ್ತು ಪ್ರೊ ಆಕ್ಟಿವ್ ಇಂತರ್ವೇಷನ್ ಎಂದು ನಾನು ಭಾವಿಸುತ್ತೇನೆ. “ಎಲ್ಲಾ ಸರ್ಕಾರಿ ಮತ್ತು ಆರೋಗ್ಯ ಅಧಿಕಾರಿಗಳ ಸಮನ್ವಯದೊಂದಿಗೆ ನಾವು ಈ ಕೊಂಡಿಯನ್ನು ಮುರಿಯಲು ಸೋಂಕನ್ನು ದೂರವಾಗಿಸಲು ಉತ್ತಮ ಅಭ್ಯಾಸಗಳನ್ನು ಅನುಸರಿಸುತ್ತಿದ್ದೇವೆ. ಎಲ್ಲಾ ಆರೋಗ್ಯ ಪ್ರೋಟೋಕಾಲ್ಗಳು ಮತ್ತು ಅಧಿಕೃತ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆ” ಎಂದು ಚೌಧರಿ ಘೋಷಿಸಿದರು.
“ನಮ್ಮ ಕಚೇರಿ, ನ್ಯೂಸ್‌ರೂಮ್ ಮತ್ತು ಸ್ಟುಡಿಯೋಗಳನ್ನು ನೈರ್ಮಲ್ಯೀಕರಣಕ್ಕಾಗಿ ಸೀಲ್ ಮಾಡಲಾಗಿದೆ. ಝೀ ನ್ಯೂಸ್ ತಂಡವನ್ನು ಸದ್ಯಕ್ಕೆ ಪರ್ಯಾಯ ಸೌಲಭ್ಯಕ್ಕೆ ಸ್ಥಳಾಂತರಿಸಲಾಗಿದೆ” ಎಂದು ಅವರು ಹೇಳಿದರು. ಉಳಿದ ನೌಕರರ ಪರೀಕ್ಷೆ ಮುಂದುವರಿಯುತ್ತದೆ. ಕೋವಿಡ್ -19 ಧನಾತ್ಮಕ ಮತ್ತು ರೋಗದ ವಾಹಕಗಳಾಗಿರಬಹುದಾದ ಲಕ್ಷಣರಹಿತ ವ್ಯಕ್ತಿಗಳನ್ನು ಪರೀಕ್ಷಿಸಲು ಐಸಿಎಂಆರ್ ಸಹ ತನ್ನ ಪರೀಕ್ಷಾ ಮಾನದಂಡಗಳನ್ನು ಸಡಿಲಗೊಳಿಸಿದೆ. “ಇದು ಹೆಚ್ಚಿನ ಸಂಖ್ಯೆಯ ಕೋವಿಡ್ -19 ಪ್ರಕರಣಗಳನ್ನು ಗುರುತಿಸಲು, ಪ್ರತ್ಯೇಕಿಸಲು ಮತ್ತು ಚಿಕಿತ್ಸೆ ನೀಡಲು ನೆರವಾಗಲಿದೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇದು ಅತ್ಯುತ್ತಮ ಮಾರ್ಗವೆಂದು ನಾವು ನಂಬುತ್ತೇವೆ” ಎಂದು ಚೌಧರಿ ಹೇಳಿದರು.
ನೋಯ್ಡಾದಲ್ಲಿ ಸಾಕಷ್ಟು ನಿಯಂತ್ರಣ ವಲಯಗಳಿವೆ, ಆಕ್ರಮಣಕಾರಿ ಪರೀಕ್ಷೆ, ಪ್ರತ್ಯೇಕತೆ ಮತ್ತು ಚಿಕಿತ್ಸೆಯು ತಂಡದ ಸದಸ್ಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇರುವ ಏಕೈಕ ಮಾರ್ಗವಾಗಿದೆ ಎಂದು ಅವರು ಹೇಳಿದರು.ಈ ಸಮಯದಲ್ಲಿ, ಝೀ ಮೀಡಿಯಾ ಕಾರ್ಪೊರೇಶನ್ ಲಿಮಿಟೆಡ್ 2,500 ಉದ್ಯೋಗಿಗಳನ್ನು ಹೊಂದಿದೆ, ಇದು ಖಾಸಗಿ ವಲಯದಲ್ಲಿ ಅತಿ ದೊಡ್ಡ ಮೀಡಿಯಾ ಸಂಸ್ಥೆಯಾಗಿದೆ. “ಪ್ರತಿಯೊಬ್ಬರ ಸುರಕ್ಷತೆಗೆ ನಾವು ಬದ್ಧರಾಗಿದ್ದೇವೆ” ಎಂದು ಹೇಳಿಕೆ ತಿಳಿಸಿದೆ