ನನ್ನ ಮಗಳು ಒತ್ತಡದಲ್ಲಿದ್ದಾಳೆ,ಆಕೆಯ ಹೇಳಿಕೆ ಪರಿಗಣಿಸಬಾರದು: ಸಿಡಿ ಸಂತ್ರಸ್ಥೆಯ ಪೋಷಕರು

ಬೆಳಗಾವಿ: ಮಾಜಿ ಸಚಿವ ರಮೇಶ್ ಜರಕಿಹೊಳಿ ಸಿಡಿ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಪೋಷಕರು ಬೆಳಗಾವಿಯಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿದ್ದು, “ನನ್ನ ಮಗಳು ಒತ್ತಡದಲ್ಲಿದ್ದಾಳೆ. ಆಕೆ ಒತ್ತಡದಲ್ಲಿ ನೀಡುವಂತಹ ಯಾವುದೇ ಹೇಳಿಕೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.


ಈ ಬಗ್ಗೆ ಮಾಹಿತಿ ನೀಡಿರುವ ಸಿಡಿ ಸಂತ್ರಸ್ಥೆಯ ಪೋಷಕರು, ನಮ್ಮ ಮಗಳನ್ನು ಸಿಡಿ ಗ್ಯಾಂಗ್ ಒತ್ತಡದಲ್ಲಿಟ್ಟಿದೆ. ನಮ್ಮ ಜೊತೆ ಮಾತನಾಡುವುದಕ್ಕೆ ಅವಕಾಶ ನೀಡುತ್ತಿಲ್ಲ. ನಮ್ಮ ಮಗಳನ್ನು ಒತ್ತಡದಿಂದ ಮೊದಲ ಕಾಪಾಡಿ ಎಂದು ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ, ಡಿಕೆಶಿ ಕಡೆಯವರಿಂದ ನನ್ನ ಮಗಳನ್ನು ಕಾಪಾಡಿ, ಆಕೆಯನ್ನು ರಾಜಕೀಯ ದಾಳವಾಗಿ ಬಳಸಿದ್ದಾರೆ. ಮೊದಲು ನಮ್ಮ ಮಗಳು ಅಲ್ಲಿಂದ ಹೊರಬರಬೇಕು.

ಆಕೆಯನ್ನು ಮೊದಲು ನಮಗೆ ಒಪ್ಪಿಸಿ ನಾಲ್ಕು ದಿನಗಳ ಕಾಲ ಆಕೆಯನ್ನು ನಮ್ಮ ಬಳಿಗೆ ಕಳುಹಿಸಿ. ಬಳಿಕ ಆಕೆ ನೀಡುವ ಹೇಳಿಕೆಗಳನ್ನು ಪಡೆದುಕೊಳ್ಳಿ. ನನ್ನ ಮಗಳು ನಮ್ಮ ಜತೆ ಇರುವುದಕ್ಕೆ ಬಯಸಿದರೆ ಬರಲಿ. ನಮ್ಮ ಜತೆಯಿರುವುದಕ್ಕೆ ಇಚ್ಛಿಸುವುದಿಲ್ಲ ಎಂದರೆ ಜಡ್ಜ್ ಮುಂದೆಯೇ ಹಾಜರಾಗಲಿ. ಅದಕ್ಕೂ ಮೊದಲು ಒತ್ತಡದಲ್ಲಿ ನಮ್ಮ ಮಗಳ ಹೇಳಿಕೆ ಪಡೆಯುವುದು ಬೇಡ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!