ಹೆಣ್ಣುಮಗಳನ್ನಿಟ್ಟುಕೊಂಡು ಡಿಕೆಶಿ ರಾಜಕಾರಣ: ಯುವತಿ ಪೋಷಕರ ಗಂಭೀರ ಆರೋಪ

ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಪಟ್ಟಿದ್ದು ಎನ್ನಲಾದ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ (ಎಸ್ಐಟಿ) ಮುಂದೆ ಹಾಜರಾಗಿರುವ ಸಿ.ಡಿ.ಯಲ್ಲಿದ್ದ ಯುವತಿಯ ಪೋಷಕರು, ಎಲ್ಲ ಸಾಕ್ಷ್ಯಗಳನ್ನು ಅಧಿಕಾರಿಗಳಿಗೆ ನೀಡಿರುವುದಾಗಿ ತಿಳಿಸಿದ್ದಾರೆ. 

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತನ್ನ ಮಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ನಮ್ಮ ಅಕ್ಕನನ್ನು ಮುಂದಿಟ್ಟುಕೊಂಡು ಡಿಕೆ ಶಿವಕುಮಾರ್ ಹೀನಾ ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಬಳಿ ಇದ್ದ ಸಾಕ್ಷ್ಯಗಳನ್ನು ಅಧಿಕಾರಿಗಳಿಗೆ ನೀಡಿದ್ದೇವೆ. ನನ್ನ ಅಕ್ಕನನ್ನು ಗೋವಾಕ್ಕೆ ಕಳುಹಿಸಿದ್ದಾರೆ. ಯಾವುದೇ ರೀತಿಯ ಬೆದರಿಕೆ ಇಲ್ಲ , ಪೊಲೀಸರು ಭದ್ರತೆ ನೀಡುತ್ತಿದ್ದಾರೆ ಎಂದು ಯುವತಿಯ ಸಹೋದರು ತಿಳಿಸಿದರು.

ಫೆಬ್ರವರಿ 5ರಂದು ಕೊನೆಯ ಬಾರಿಗೆ ತಮ್ಮ ಅಕ್ಕನೊಂದಿಗೆ ಮಾತುಕತೆ ನಡೆಸಿದ್ದಾಗಿ ತಿಳಿಸಿದ ಯುವತಿ ಸಹೋದರ, ನರೇಶ್ ಗೌಡ ನೀಡಿರುವ ಹೇಳಿಕೆ ಸುಳ್ಳು, ನಮ್ಮ ಅಕ್ಕ ನಮಗೆ ವಾಪಸ್ ಬೇಕು, ಡಿಕೆ ಶಿವಕುಮಾರ್ ಇಂತಹ ರಾಜಕೀಯ ಮಾಡಬಾರದು ಎಂದು ಹೇಳಿದರು. ಎಸ್ಐಟಿ ಅಧಿಕಾರಿಗಳು, ಯುವತಿ ಹಾಗೂ ಅವರ ಪೋಷಕರಿಗೆ ನೋಟಿಸ್ ನೀಡಿದ್ದಾರೆ. ಇದರಂತೆ ಶನಿವಾರ ಬೆಳಗ್ಗೆ ಯುವತಿಯ ತಂದೆ-ತಾಯಿ ಹಾಗೂ ಇಬ್ಬರು ಸಹೋದರರು ವಿಚಾರಣೆಗೆ ಹಾಜರಾಗಿದ್ದರು. 

ಅಜ್ಞಾತ ಸ್ಥಳದಲ್ಲಿರುವ ಯುವತಿ, ಈಗಾಗಲೇ ನಾಲ್ಕು ವಿಡಿಯೊ ಹರಿಬಿಟ್ಟಿದ್ದಾರೆ. ಆದರೆ ತಮ್ಮ ಮಗಳು ಎಲ್ಲಿ ಇದ್ದಾರೆ ಎಂಬುದು ತಿಳಿದಿಲ್ಲ .

Leave a Reply

Your email address will not be published. Required fields are marked *

error: Content is protected !!