ಪುಣೆ: ಭಾರಿ ಅಗ್ನಿ ಅವಘಡ – ಸುಮಾರು 500 ಅಂಗಡಿಗಳು ಸುಟ್ಟು ಭಸ್ಮ
ಪುಣೆ: ಕ್ಯಾಂಪ್ ಪ್ರದೇಶದ ಪ್ರಸಿದ್ಧ ಫ್ಯಾಶನ್ ಸ್ಟ್ರೀಟ್ ಮಾರುಕಟ್ಟೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ ಸುಮಾರು 500 ಅಂಗಡಿಗಳು ಸುಟ್ಟು ಭಸ್ಮವಾಗಿರುವ ಘನಟೆ ಮಾ.26ರ ತಡರಾತ್ರಿ ನಡೆದಿದೆ. ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು.
ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ.”ಬೆಂಕಿ ಕಾಣಿಸಿಕೊಂಡ ತಕ್ಷಣ, ಸ್ಥಳೀಯ ಜನರು ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದು, ಸುಮಾರು 16 ಅಗ್ನಿಶಾಮಕ ವಾಹನಗಳು ಮತ್ತು ವಾಟರ್ ಟ್ಯಾಂಕರ್ ಗಳು ಸ್ಥಳಕ್ಕೆ ಧಾವಿಸಿ ಬೆಂಕಿನಂದಿಸುವ ಕಾರ್ಯದಲ್ಲಿ ನಿರತವಾಗಿತ್ತು. ಬಳಿಕ ಮುಂಜಾನೆ 1 ಗಂಟೆಯ ಹೊತ್ತಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.
ಆದರೆ ಅದಾಗಲೇ, ಬೆಂಕಿನ ಕೆನ್ನಾಲಗೆಗೆ ಸುಮಾರು 500 ಅಂಗಡಿಗಳನ್ನು ಸುಟ್ಟು ಭಸ್ಮವಾಗಿದ್ದವು. ಅಗ್ನಿ ದುರಂತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ತಿಳಿಸಿದ್ದಾರೆ.
ಪುಣೆ ಕಂಟೋನ್ಮೆಂಟ್ ಬೋರ್ಡ್ (ಪಿಸಿಬಿ) ಪ್ರದೇಶದ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಫ್ಯಾಶನ್ ಸ್ಟ್ರೀಟ್ ಪ್ರಸಿದ್ಧ ‘ವಿಂಡೋ ಶಾಪಿಂಗ್’ ತಾಣವಾಗಿದ್ದು, ಇದು ಉಡುಪುಗಳು, ಬೂಟುಗಳು, ಕನ್ನಡಕಗಳು ಮತ್ತು ಇತರ ದಿನ ಉಪಯೋಗಿ ವಸ್ತುಗಳನ್ನು ಮಾರಾಟ ಮಾಡುವ ಸಣ್ಣ ಮಳಿಗೆಗಳನ್ನು ಹೊಂದಿದೆ ಎಂದು ತಿಳಿದು ಬಂದಿದೆ.