ಅಮೆಜಾನ್‌ನ 30ನೇ ವಾರ್ಷಿಕೋತ್ಸ: ಉಚಿತ ಉಡುಗೊರೆ -ಹೊಸ ವಾಟ್ಸಾಪ್ ಸಂದೇಶ ಬಗ್ಗೆ ಎಚ್ಚರವಿರಲಿ!

ನವದೆಹಲಿ: ಅಮೆಜಾನ್‌ನ 30 ನೇ ವಾರ್ಷಿಕೋತ್ಸವದ ಅಂಗವಾಗಿ ಉಚಿತ ಉಡುಗೊರೆಗಳನ್ನು ಪಡೆಯಲು ಸಮೀಕ್ಷೆಯೊಂದರಲ್ಲಿ ಭಾಗವಹಿಸುವಂತೆ ನೀವು ವಾಟ್ಸಾಪ್‌ನಲ್ಲಿ ಸಂದೇಶವನ್ನು ಸ್ವೀಕರಿಸಿದ್ದೀರಾ? ಹೌದಾದರೆ, ಹುಷಾರಾಗಿರಿ, ಅದೊಂದು ಹಗರಣವಾಗಿದ್ದು, ನಿಮ್ಮನ್ನು ಹಳ್ಳಕ್ಕೆ ಬೀಳಿಸುವ ತಂತ್ರವಾಗಿದೆ. ಅಮೆಜಾನ್ 30 ನೇ ವಾರ್ಷಿಕೋತ್ಸವ ಆಚರಣೆಗಾಗಿ  www.amazon.com ನಿಂದ ಪ್ರತಿಯೊಬ್ಬರಿಗೂ ಉಚಿತ ಕೊಡುಗೆಗಳು ಎಂಬ ಮೇಸೆಜ್ ಬರುತ್ತದೆ.

ಬಳಕೆದಾರರು ಮೆಸೇಜ್ ಮೇಲೆ ಕ್ಲಿಕ್ ಮಾಡಿದರೆ ಹೊಸದೊಂದು ವಿಂಡೋ ಓಪನ್ ಆಗಿ, ” ಧನ್ಯವಾದಗಳು, ನಮ್ಮ ಸಮೀಕ್ಷೆಯಲ್ಲಿ ಭಾಗವಹಿಸಲು ನಿಮ್ಮನ್ನು ಆಯ್ಕೆ ಮಾಡಲಾಗಿದೆ. ಇದು ಕೇವಲ ಒಂದು ನಿಮಿಷ ತೆಗೆದುಕೊಳ್ಳುತ್ತದೆ, ಮತ್ತು ನೀವು ಅದ್ಭುತ ಬಹುಮಾನವನ್ನು ಸ್ವೀಕರಿಸುತ್ತೀರಿ ಎಂದು ಹೇಳಲಾಗುತ್ತದೆ.

ಸೇವೆಯ ಗುಣಮಟ್ಟವನ್ನು ಸುಧಾರಿಸುವ ಗುರಿ’ ಎಂಬ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಲು ಬಳಕೆದಾರರನ್ನು ಕೇಳಲಾಗುತ್ತದೆ: ವಯಸ್ಸಿನ ಗುಂಪು, ಲಿಂಗ, ಅಮೆಜಾನ್ ಒದಗಿಸುವ ಸೇವೆಯ ಗುಣಮಟ್ಟ ಮತ್ತು ಬಳಕೆದಾರರು ಯಾವ ರೀತಿಯ ಫೋನ್ ಹೊಂದಿದ್ದಾರೆ

ಅಮೆಜಾನ್ ನಿಂದ ಪೂರೈಸುವ ಸೇವೆಯ ಗುಣಮಟ್ಟ, ವಯಸ್ಸಿನ ಗುಂಪು, ಲಿಂಗತ್ವ, ನೀವು ಯಾವ ರೀತಿಯ ಫೋನ್ ಬಳಸುತ್ತಿರಾ ಎಂಬ ನಾಲ್ಕು ಪ್ರಶ್ನೆಗಳನ್ನು ಬಳಕೆದಾರರಿಗೆ ಕೇಳಲಾಗುತ್ತದೆ. ಒಂದು ಬಾರಿ ಬಳಕೆದಾರರು ಉತ್ತರವನ್ನು ಕಳುಹಿಸಿದರೆ ಗಿಫ್ಟ್ ಬಾಕ್ಸ್ ಗಳ  ಇಮೇಜ್  ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಒಂದನ್ನು ಆಯ್ಕೆ ಮಾಡಿದರೆ ಇದನ್ನು ಐದು ವಾಟ್ಸಾಪ್ ಗ್ರೂಪ್ ಅಥವಾ 20 ಸ್ನೇಹಿತರಿಗೆ ಶೇರ್ ಮಾಡುವಂತೆ ಮತ್ತೆ ಬಳಕೆದಾರರನ್ನು ನಕಲಿ ವೆಬ್ ಸೈಟ್  ಕೇಳುತ್ತದೆ. ಅಲ್ಲದೇ, ಆ್ಯಪ್ ನ್ನು ಡೌನ್ ಲೋಡ್ ಮಾಡಿಕೊಂಡು ವಿಳಾಸವನ್ನು ನಮೂದಿಸುವಂತೆ ಕೇಳುತ್ತದೆ. ನಂತರ ಐದು- ಏಳು ದಿನಗಳಲ್ಲಿ ಗಿಫ್ಟ್ ನನ್ನು ಕಳುಹಿಸುವುದಾಗಿ ಹೇಳುತ್ತದೆ.

ಇಂತಹ ವೆಬ್ ಸೈಟ್ ನಲ್ಲಿ ಯಾವುದೇ ಮಾಹಿತಿ ನೀಡುವುದು ಅಪಾಯಕಾರಿ. ಇದರಿಂದ ನಿಮ್ಮ ವೈಯಕ್ತಿಕ ಮಾಹಿತಿ ನಷ್ಟವಾಗುವುದರ ಜೊತೆಗೆ ಹಣಕಾಸು ವಂಚನೆಗೆ ಒಳಗಾಗಬೇಕಾಗುತ್ತದೆ. ಆದ್ದರಿಂದ ಬಳಕೆದಾರರು, ಇಂತಹ ಯಾವುದೇ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬೇಡಿ. ಕೆಲವು ವೇಳೆ ಹ್ಯಾಕರ್ ಗಳು ಕೂಡಾ ಇಂತಹ ಲಿಂಕ್ಸ್ ಗಳನ್ನು ಬಳಸಬಹುದು.

ಕ್ಲಿಕ್ ಮಾಡಬಹುದಾದ ಲಿಂಕ್‌ನೊಂದಿಗೆ ನೀವು ಯಾದೃಚ್ಚಿಕ ಮೇಸೆಜ್ ಗಳನ್ನು ಸ್ವೀಕರಿಸಿದಾಗ, ಲಿಂಕ್ ವಿಳಾಸವನ್ನು ಪರಿಶೀಲಿಸಬೇಕು.URL ಗೆ ಹೋಲುವಂತೆ ಇದನ್ನು ಸ್ಕ್ಯಾಮರ್‌ಗಳು ತಯಾರಿಸುತ್ತಾರೆ, ಆದರೆ ನೀವು ಅದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅದರಲ್ಲಿ ನೀವು ಜಂಕ್ ಅಥವಾ ಅನಗತ್ಯ ಅಕ್ಷರಗಳನ್ನು ಕಾಣಬಹುದು.ಯಾವುದೇ ಸಂದರ್ಭದಲ್ಲಿ, ಯಾವುದೇ URL ಆಗಿದ್ದರೂ, ಜ್ಞಾತ ಸಂಖ್ಯೆಯಿಂದ ಕಳುಹಿಸಲಾದ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡುವುದನ್ನು ತಪ್ಪಿಸಬೇಕು.
 

1 thought on “ಅಮೆಜಾನ್‌ನ 30ನೇ ವಾರ್ಷಿಕೋತ್ಸ: ಉಚಿತ ಉಡುಗೊರೆ -ಹೊಸ ವಾಟ್ಸಾಪ್ ಸಂದೇಶ ಬಗ್ಗೆ ಎಚ್ಚರವಿರಲಿ!

Leave a Reply

Your email address will not be published. Required fields are marked *

error: Content is protected !!